ಗಂಟಲಲ್ಲಿ ಗೋಡಂಬಿ ಸಿಕ್ಕಿಹಾಕಿಕೊಂಡು ಬಾಲಕ ಸಾವು! - Mahanayaka
12:52 PM Wednesday 11 - December 2024

ಗಂಟಲಲ್ಲಿ ಗೋಡಂಬಿ ಸಿಕ್ಕಿಹಾಕಿಕೊಂಡು ಬಾಲಕ ಸಾವು!

11/03/2021

ಪುತ್ತೂರು:  ಗೋಡಂಬಿ ತಿನ್ನುತ್ತಿದ್ದ ವೇಳೆ ಗಂಟಲಲ್ಲಿ ಸಿಕ್ಕಿಹಾಕಿಕೊಂಡು 3 ವರ್ಷದ ಮಗು ಸಾವಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಾಲ್ಮರ  ಎಂಬಲ್ಲಿ ನಡೆದಿದೆ.

ಪುತ್ತೂರಿನ ಸಾಲ್ಮರದ ಉರಮಾಲ್ ನಿವಾಸಿ ಇಸಾಕ್ ಎಂಬವರ 3 ವರ್ಷದ ಮಗು ನವಾಜ್ ಬುಧವಾರ ಮಧ್ಯಾಹ್ನ ಗೋಡಂಬಿ ತಿನ್ನುತ್ತಿದ್ದು. ಈ ವೇಳೆ ಗೋಡಂಬಿ ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದ್ದು,  ಬಾಲಕ ಅಸ್ವಸ್ಥನಾಗಿದ್ದಾನೆ.

ತಕ್ಷಣವೇ ಮಗುವನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯ ಬೇಕು ಎಂದು ವೈದ್ಯರು ಹೇಳಿದ್ದು, ಈ ವೇಳೆಗೆ ಮಗು ಸಾವನ್ನಪ್ಪಿದೆ. ಘಟನೆ ಸಂಬಂಧ ಪೊಲೀಸರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ಸುದ್ದಿ