ಎನ್ಆರ್ ಸಿ ಅರ್ಜಿ ಸಂಖ್ಯೆ ಇಲ್ಲದಿದ್ರೆ ಆಧಾರ್ ಕೊಡಲ್ಲ: ಅಸ್ಸಾಂ ಸಿಎಂ ವಿವಾದಾತ್ಮಕ ಹೇಳಿಕೆ - Mahanayaka
4:17 PM Wednesday 5 - February 2025

ಎನ್ಆರ್ ಸಿ ಅರ್ಜಿ ಸಂಖ್ಯೆ ಇಲ್ಲದಿದ್ರೆ ಆಧಾರ್ ಕೊಡಲ್ಲ: ಅಸ್ಸಾಂ ಸಿಎಂ ವಿವಾದಾತ್ಮಕ ಹೇಳಿಕೆ

08/09/2024

ರಾಜ್ಯದಲ್ಲಿ ಅಕ್ರಮ ವಲಸಿಗರನ್ನು ಹತ್ತಿಕ್ಕುವ ಪ್ರಯತ್ನಗಳ ಭಾಗವಾಗಿ ಅಸ್ಸಾಂ ರಾಜ್ಯದಲ್ಲಿ ಆಧಾರ್ ಕಾರ್ಡ್ ಗಳಿಗಾಗಿ ಅರ್ಜಿ ಸಲ್ಲಿಸುವ ಹೊಸ ಅರ್ಜಿದಾರರು ತಮ್ಮ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ ಸಿ) ಅರ್ಜಿ ಸ್ವೀಕೃತಿ ಸಂಖ್ಯೆಯನ್ನು ಸಲ್ಲಿಸಬೇಕಾಗುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿಕೆ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶರ್ಮಾ, ಆಧಾರ್ ಅರ್ಜಿಗಳ ಸಂಖ್ಯೆ ರಾಜ್ಯದ ಜನಸಂಖ್ಯೆಯನ್ನು ಮೀರಿದೆ. ಇದು ಸಂಭಾವ್ಯ ಮೋಸದ ಅರ್ಜಿಗಳ ಬಗ್ಗೆ ಕಳವಳವನ್ನು ಹೆಚ್ಚಿಸಿದೆ ಎಂದರು. ಆಧಾರ್ ಕಾರ್ಡ್ ಹೊಂದಿರುವವರು ಕನಿಷ್ಠ ನಾಲ್ಕು ಜಿಲ್ಲೆಗಳಲ್ಲಿ ಯೋಜಿತ ಜನಸಂಖ್ಯೆಯನ್ನು ಮೀರಿದ್ದಾರೆ. ಇದು ಆತಂಕಕಾರಿ ಎಂದು ಮುಖ್ಯಮಂತ್ರಿ ಹೇಳಿದರು.

ಆಧಾರ್ ಕಾರ್ಡ್ ಗಾಗಿ ಅರ್ಜಿಗಳು ಜನಸಂಖ್ಯೆಗಿಂತ ಹೆಚ್ಚಾಗಿದೆ. ಅನುಮಾನಾಸ್ಪದ ನಾಗರಿಕರು ಇದ್ದಾರೆಂದು ಇದು ಸೂಚಿಸುತ್ತದೆ ಮತ್ತು ಹೊಸ ಅರ್ಜಿದಾರರು ತಮ್ಮ ಎನ್ಆರ್ ಸಿ ಅರ್ಜಿ ಸ್ವೀಕೃತಿ ಸಂಖ್ಯೆಯನ್ನು ಸಲ್ಲಿಸಬೇಕಾಗುತ್ತದೆ ಎಂದು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ