ಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕೆ ಮುಸ್ಲಿಮ್ ಮುಖಂಡನಿಗೆ ಸಾಮಾಜಿಕ ಬಹಿಷ್ಕಾರ!
ಹುಬ್ಬಳ್ಳಿ: ಬಿಜೆಪಿ ಸೇರ್ಪಡೆಗೊಂಡಿದ್ದಕ್ಕೆ ಮುಸ್ಲಿಮ್ ಮುಖಂಡರೋರ್ವರಿಗೆ ಬಹಿಷ್ಕಾರ ಹಾಕಲಾಗಿದೆ ಎಂದು ಎಂದು ಆರೋಪಿಸಲಾಗಿದ್ದು, ಜಮಾತ್ ನಿಂದ ಅವರನ್ನು ಹೊರ ಹಾಕುವ ಮೂಲಕ ಬಹಿಷ್ಕರಿಸಲಾಗಿದೆ ಆರೋಪಿಸಲಾಗಿದೆ.
ನಗರದ ಮುಲ್ಲಾ ಓಣಿಯ ಅಬ್ದುಲ್ ಮುನಾಫ್ ಐನಾಪುರಿ ಮಾರ್ಚ್ 7ರಂದು ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಡಡೆಗೊಂಡಿದ್ದರು. ಸದಾ ಮುಸ್ಲಿಮರನ್ನು ಅವಮಾನಿಸುತ್ತಾ, ದೇಶದಲ್ಲಿ ಮುಸ್ಲಿಮರನ್ನು ದ್ವೇಷಿಸುವ ಮನೋಭಾವವನ್ನು ಬಿತ್ತುತ್ತಿರುವ ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ ಮುಸ್ಲಿಮರು ಗರಂ ಆಗಿದ್ದು, ಅವರನ್ನು ಜಮಾತ್ ನಿಂದಲೇ ಹೊರ ಹಾಕಿದ್ದಾರೆ.
ಮುನಾಫ್ ಅವರು ಓಣಿಯ ಮಸೀದಿಯಲ್ಲಿನ ವಕ್ಫ್ ಬೋರ್ಡ್ ಕಟ್ಟಡದಲ್ಲಿ 40 ವರ್ಷಗಳಿಂದ ಅಂಗಡಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಅಂಗಡಿಯನ್ನು ಕೂಡ ತೆರವುಗೊಳಿಸುವಂತೆ ಒತ್ತಡ ಹೇರಲಾಗಿದೆ ಎಂದು ಮುನಾಫ್ ಹೇಳಿದ್ದು, ತನಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ತಾನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದೆ. ಅದೇ ದಿನ ಜಮಾತ್ ಸಭೆ ನಡೆಸಿ, ಬಿಜೆಪಿ ಸೇರ್ಪಡೆಗೊಂಡಿದ್ದಕ್ಕೆ ಆಕ್ಷೇಪಿಸಿದ್ದಾರೆ. ಸಮುದಾಯಕ್ಕೆ ಬರಬೇಕಾದರೆ ಬಿಜೆಪಿಯನ್ನು ಬಿಟ್ಟು ಬಾ ಎಂದು ಹೇಳಿದ್ದಾರೆ ಎಂದು ಮುನಾಫ್ ಆರೋಪಿಸಿದ್ದಾರೆ. ಇದೀಗ ತನ್ನಅಂಗಡಿಯನ್ನೂ ಖಾಲಿ ಮಾಡಲು ಹೇಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸದಾ ಒಂದಲ್ಲ ಒಂದು ಹೇಳಿಕೆಗಳನ್ನು ನೀಡುವ ಮೂಲಕ ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಬಿಜೆಪಿ ಎತ್ತಿಕಟ್ಟುತ್ತಿದೆ. ಇಂತಹ ಪಕ್ಷಕ್ಕೆ ಮುಸ್ಲಿಮರು ಸೇರ್ಪಡೆಗೊಳ್ಳಬಾರದು ಎನ್ನುವ ಮನಸ್ಥಿತಿ ಸದ್ಯ ಮುಸ್ಲಿಮ್ ಸಮುದಾಯದಲ್ಲಿದೆ. ಆದರೆ ಈ ನಡುವೆ ಕೆಲವರು ಬಿಜೆಪಿಯ ಮುಂದೆ ಮಂಡಿಯೂರುತ್ತಿರುವುದು ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.