ದ್ವಿತೀಯ ಪಿಯುಸಿ ಪಾಸ್ ಆದವರಿಗೆ ನೌಕಾಪಡೆಯಲ್ಲಿ ಉದ್ಯೋಗಾವಕಾಶ: ವೇತನ ₹47,600/-
Indian Navy Medical Assistant Recruitment 2024 : ಭಾರತೀಯ ನೌಕಾಪಡೆಯಲ್ಲಿ ಯುದ್ಧ ವಿಮಾನಗಳು, ಕ್ಷಿಪಣಿ ವಾಹಕಗಳು, ಜಲಂತರ್ಗಾಮಿಗಳ ಹಾಗೂ ಸಮರ ನೌಕೆಗಳಲ್ಲಿ ಕೆಲಸ ಮಾಡುವ ಅವಕಾಶವಿದ್ದು ಹಾಗೂ ವೈದ್ಯಕೀಯ ವಿಭಾಗಗಳಲ್ಲಿ ಉದ್ಯೋಗ ಮಾಡುವ ಅವಕಾಶವಿದೆ.
ವೈದ್ಯಕೀಯ ಸಹಾಯಕ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಭಾರತೀಯ ನೌಕಾಪಡೆ ಸೀನಿಯರ್ ಸೆಕೆಂಡರಿ ರೆಕ್ರೂಟ್ (SSR) ಅರ್ಹ ಅಭ್ಯರ್ಥಿಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಿದೆ. ಇವರ ದ್ವಿತೀಯ ಪಿಯುಸಿ ಪಾಸಾದವರಿಗೆ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾವಕಾಶವಿದ್ದು, ಆಸಕ್ತರು ಬೇಗನೆ ಅರ್ಜಿ ಸಲ್ಲಿಸಿ ಇದರ ಅವಕಾಶ ಸದುಪಯೋಗ ಪಡಿಸಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಅರ್ಹತೆಗಳು :
ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಈ ನೇಮಕಾತಿಯಲ್ಲಿ ಅವಕಾಶವಿದೆ. ಶೈಕ್ಷಣಿಕ ಅರ್ಹತೆಗಳನ್ನು ನೋಡುವುದಾದರೆ, ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಮುಗಿಸಿರಬೇಕು. ಅದರಲ್ಲಿಯೂ ಪ್ರಮುಖವಾಗಿ ಬೌತಶಾಸ್ತ್ರ ಜೀವಶಾಸ್ತ್ರ ಮತ್ತು ರಸಾಯನ ಶಾಸ್ತ್ರ ವಿಷಯಗಳನ್ನು ಅಧ್ಯಯನ ಮಾಡಿದ್ದು, ಪ್ರತಿ ವಿಷಯದಲ್ಲೂ ಕನಿಷ್ಠ 40% ಅಂಕಗಳನ್ನು ಪಡೆದಿರಬೇಕು ಹಾಗೂ ಒಟ್ಟಾರೆ ಅಂಕಗಳು 50% ಮೇಲಿರಬೇಕು.
ನೇಮಕಾತಿ ಪ್ರಕ್ರಿಯೆಯಲ್ಲಿ ನೇಮಕಗೊಂಡ ಅಭ್ಯರ್ಥಿಗಳು ಭಾರತೀಯ ವಾಯುಪಡೆಯಲ್ಲಿ ವೈದ್ಯಕೀಯ ಸಹಾಯಕರಾಗಿ ಕನಿಷ್ಠ 20 ವರ್ಷ ಸೇವೆ ಸಲ್ಲಿಸಬೇಕು. ಸೇವೆ ಸಲ್ಲಿಸುವ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಮಾಸಿಕ ವೇತನವು 47,600ರೂ. ಯಿಂದ 1,51,000ರೂ. ವರೆಗೆ ಇರಲಿದೆ. ಇದರ ಜೊತೆಗೆ ನೌಕಾಪಡೆಯ ವಿವಿಧ ಸೌಲಭ್ಯಗಳ ಜೊತೆಗೆ ವೈದ್ಯಕೀಯ ಸೌಲಭ್ಯ, ವಿಮಾ ಯೋಜನೆಗಳು ಕೂಡ ಸಿಗಲಿದೆ.
ಅರ್ಜಿ ಸಲ್ಲಿಸುವ ಮಾಹಿತಿ :
ಅರ್ಹರಿರುವ ಅಭ್ಯರ್ಥಿಗಳು ನೌಕಾಪಡೆಯ ಅಧಿಕೃತ ಜಾಲತಾಣಕ್ಕೆ ಲಾಗಿನ್ ಆಗಿ ಅರ್ಜಿ ಸಲ್ಲಿಸಬೇಕು. ಈ ಅಧಿಕೃತ ಜಾಲತಾಣದ ಲಿಂಕನ್ನು ಕೆಳಗೆ ನೀಡಲಾಗಿರುತ್ತದೆ. ಅರ್ಜಿ ಸಲ್ಲಿಸೋ ಮುನ್ನ ಅಭ್ಯರ್ಥಿಗಳು ಮತ್ತೊಮ್ಮೆ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣ ಓದಿ.
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲು ದೈಹಿಕ ಕ್ಷಮತೆ ಪರೀಕ್ಷೆ ನಡೆಸಿ ನಂತರದಲ್ಲಿ ಲಿಖಿತ ಪರೀಕ್ಷೆ ಹಾಗೂ ವೈದ್ಯಕೀಯ ತಪಾಸನೆಗಳನ್ನು ನಡೆಸುವುದರ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುವುದು. ಈ ಪ್ರಕ್ರಿಯೆಯು ಅಕ್ಟೋಬರ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆಗಳಿವೆ.
ಅರ್ಜಿ ಸಲ್ಲಿಸಲು 17 ಸೆಪ್ಟೆಂಬರ್ 2024 ಕೊನೆಯ ದಿನಾಂಕವಾಗಿರುವುದರಿಂದ ಅರ್ಹರಿರುವ ಅಭ್ಯರ್ಥಿಗಳು ನಿಗದಿತ ಕೊನೆಯ ದಿನಾಂಕದ ಒಳಗಾಗಿಯೇ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಲಿಂಕ್ : joinindiannavy.gov.in
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: