ವೈರಲ್ ಆದ ವೀಡಿಯೋ ಅಸಲಿಯತ್ತು ಕೊನೆಗೂ ಬಯಲು: ಧರ್ಮ ದ್ವೇಷಿಗಳಿಗೆ ಬಿತ್ತು ಛಾಟಿಯೇಟು..! - Mahanayaka
11:54 AM Sunday 22 - December 2024

ವೈರಲ್ ಆದ ವೀಡಿಯೋ ಅಸಲಿಯತ್ತು ಕೊನೆಗೂ ಬಯಲು: ಧರ್ಮ ದ್ವೇಷಿಗಳಿಗೆ ಬಿತ್ತು ಛಾಟಿಯೇಟು..!

11/09/2024

ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಕಿಟಕಿಯನ್ನು ವ್ಯಕ್ತಿಯೋರ್ವ ಒಡೆಯುತ್ತಿರುವ ಒಂದು ವಿಡಿಯೋವನ್ನು ನೀವು ನೋಡಿರಬಹುದು. ಭಾರತೀಯ ರೈಲ್ವೆಯ ವರ್ಚಸ್ಸನ್ನು ಹಾಳು ಮಾಡುವುದಕ್ಕೆ ಜಿಹಾದಿ ಪ್ರಯತ್ನ ಮಾಡ್ತಾ ಇದ್ದಾನೆ ಎಂಬ ಒಕ್ಕಣೆಯೊಂದಿಗೆ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಬಲಪಂಥೀಯ ಸೋಶಿಯಲ್ ಮೀಡಿಯಾ ಗ್ರಾಹಕರು ಈ ರೀತಿಯ ಒಕ್ಕಣೆ ಬರೆದು ಧಾರಾಳವಾಗಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಆದರೆ ಇದೀಗ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳೇ ಆ ವಿಡಿಯೋದ ಅಸಲಿಯತ್ತು ಏನು ಎಂದು ಹೇಳಿದ್ದಾರೆ.

ಈ ಬಗ್ಗೆ ರೈಲ್ವೆಯ ಸೀನಿಯರ್ ಸೆಕ್ಷನ್ ನ ಇಂಜಿನಿಯರ್ ಆಗಿರುವ ಮಂದಿರ ಮೂರ್ತಿಯವರು ಸೋಶಿಯಲ್ ಮೀಡಿಯಾದಲ್ಲಿ ಕ್ಲಾರಿಫಿಕೇಶನ್ ನೀಡಿದ್ದಾರೆ. ವಂದೇ ಭಾರತ್ ಎಕ್ಸ್ಪ್ರೆಸ್ ನ ಗಾಜಿಗೆ ಈ ಮೊದಲೇ ಹಾನಿಯಾಗಿತ್ತು.

ಆ ಗಾಜನ್ನು ಒಡೆದು ಹೊಸ ಗಾಜನ್ನು ಅಲ್ಲಿಗೆ ಫಿಕ್ಸ್ ಮಾಡುವುದಕ್ಕಾಗಿ ಹಳೆ ಗಾಜನ್ನು ಒಡೆಯಲಾಗಿತ್ತು ಎಂದವರು ಸ್ಪಷ್ಟೀಕರಣ ನೀಡಿದ್ದಾರೆ. ಸಾರ್ವಜನಿಕರು ಸೇರದ ದೂರದ ಸ್ಥಳದಲ್ಲಿ ಈ ಗಾಜು ಒಡೆಯುವ ಕೆಲಸವನ್ನು ಮಾಡಲಾಗಿದೆ ಎಂದು ಕೂಡ ಅವರು ವಿವರಿಸಿದ್ದಾರೆ ಫ್ಯಾಕ್ಟ್ ಚೆಕ್ ಮಾಡುವಲ್ಲಿ ನಿಪುಣ ವಾಗಿರುವ ಮೊಹಮ್ಮದ್ ಝುಬೇರ್ ಕೂಡ ಈ ಸ್ಪಷ್ಟೀಕರಣವನ್ನು ಹಂಚಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ