ಹಿಂದೂತ್ವ ಭಾಷಣ ಮಾಡುವವರು ಬೀಫ್ ತಿನ್ನಬಹುದೇ..? ಶಿವಸೇನಾ ನಾಯಕನ ಪ್ರಶ್ನೆ
ಹಿಂದೂತ್ವ ಭಾಷಣ ಮಾಡುವವರು ಶ್ರಾವಣ ಮಾಸದಲ್ಲಿ ಮತ್ತು ಗಣಪತಿ ಉತ್ಸವದಲ್ಲಿ ಬೀಫ್ ಸೇವಿಸುವುದು ಜನರಿಗೆ ಸ್ವೀಕಾರಾರ್ಹವೇ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ. ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಭವನ್ ಕುಲೆ ಅವರ ಮಗ ಸಂಕೇತ್ ಭವನ್ ಕುಲೆ ಮತ್ತು ಅವರ ಗೆಳೆಯರು ಒಂದು ಹೊಟೇಲಿನಲ್ಲಿ ಬೀಫ್ ಕಟ್ಲೆಟ್ ಸೇವಿಸಿರುವುದರ ಬಿಲ್ಲನ್ನು ಉಲ್ಲೇಖಿಸಿ ರಾವತ್ ಈ ಪ್ರಶ್ನೆ ಎತ್ತಿದ್ದಾರೆ.
ಲಾಹೋರಿ ಹೊಟೇಲಿನಲ್ಲಿ ಮಧ್ಯ ಸೇವಿಸಿ ಬೀಫ್ ತಿಂದು ನೀಡಿರುವ ಬಿಲ್ಲನ್ನು ರಾವತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದಿನದ ಹಿಂದೆ ಈ ಸಂಕೇತ್ ಮತ್ತು ಆತನ ಸಹಚರರು ಸಂಚರಿಸುತ್ತಿದ್ದ ಕಾರು ನಾಗಪುರದಲ್ಲಿ ಅಪಘಾತಕ್ಕೆ ಈಡಾಗಿತ್ತು. 18 ಮಂದಿ ಅಪಘಾತದಲ್ಲಿ ಗಾಯಗೊಂಡಿದ್ದರು. ಮಧ್ಯದ ಅಮಲಿನಲ್ಲಿ ಸಿಕ್ಕಸಿಕ್ಕ ಕಾರು, ವಾಹನಗಳಿಗೆ ಈ ಸಾಂಕೇತನ ಕಾರು ಡಿಕ್ಕಿ ಹೊಡೆದಿತ್ತು. ಒಂದು ವೇಳೆ ಜನಸಾಮಾನ್ಯ ವ್ಯಕ್ತಿ ಹೀಗೆ ಅಪಘಾತ ಮಾಡಿರುತ್ತಿದ್ದರೆ ಆತನ ಮತ್ತು ಆತನ ಕುಟುಂಬವನ್ನು ಬೀದಿಯಲ್ಲಿ ಪೊಲೀಸರು ಪೆರೇಡ್ ಮಾಡುತ್ತಿದ್ದರು ಎಂದು ರಾವತ್ ಹೇಳಿದ್ದಾರೆ.
ಆದರೆ ಸಂಕೇತನನ್ನು ಪೊಲೀಸರು ರಕ್ಷಿಸುತ್ತಿದ್ದಾರೆ. ಎಫ್ ಆರ್ ಎಫ್ ಐ ಆರ್ ನಲ್ಲಿ ಕಾರಿನ ಮಾಲೀಕನ ಹೆಸರನ್ನು ದಾಖಲಿಸಲಾಗಿಲ್ಲ. ಅಪಘಾತ ಸಂಭವಿಸಿದ ತಕ್ಷಣ ಚಾಲಕ ತಪ್ಪಿಸಿಕೊಂಡಿದ್ದಾನೆ. ಆ ವ್ಯಕ್ತಿಯನ್ನು ಈಗ ಎಲ್ಲರೂ ರಕ್ಷಿಸುತ್ತಿದ್ದಾರೆ. ಇದು ಯಾವ ಬಗೆಯ ನೀತಿ ಎಂದು ರಾವತ್ ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth