ತನ್ನ ಮೇಲಿನ ಕ್ರಿಮಿನಲ್ ಕೇಸ್ ನ್ನು ತಾನೇ ವಾಪಸ್ ಪಡೆಯುತ್ತಿರುವ ಯೋಗಿ ಆದಿತ್ಯನಾಥ್ | ಬಿಎಸ್ ಪಿ ಸಂಸದ ಹೇಳಿಕೆ
ಬಲ್ಲಿಯಾ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಒಂದೊಂದಾಗಿ ರದ್ದುಪಡಿಸುತ್ತಿದ್ದಾರೆ. ಈ ಮೂಲಕ ತಾನು ಮಿಸ್ಟರ್ ಕ್ಲೀನ್ ಎಂಬ ಬಿರುದು ಪಡೆಯಲು ಯತ್ನಿಸುತ್ತಿದ್ದಾರೆ ಎಂದು ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ) ಸಂಸದ ಅಫ್ಜಲ್ ಅನ್ಸಾರಿ ಹೇಳಿದ್ದಾರೆ.
ಶುಕ್ರವಾರ ಸಂಜೆ ಬಲಿಯಾ ಜಿಲ್ಲೆಯ ಬೆಲ್ತಾರಾ ರಸ್ತೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಘಾಜಿಪುರ ಸಂಸದ ಅಫ್ಜಲ್ ಅನ್ಸಾರಿ ಬಿಜೆಪಿ ದ್ವೇಷ ರಾಜಕಾರಣದಲ್ಲಿ ತೊಡಗಿದೆ. ಸಾಮಾಜಿಕ ಸಾಮರಸ್ಯವನ್ನು ನಾಶಪಡಿಸುವ ಮೂಲಕ ಐದು ದಶಕಗಳ ಹಿಂದಕ್ಕೆ ದೇಶವನ್ನು ತಳ್ಳಿದೆ ಹೇಳಿದ್ದಾರೆ.
ಬಿಜೆಪಿಯು ಉತ್ತರ ಪ್ರದೇಶವನ್ನು ನಾಲ್ಕು ವಿಭಾಗವಾಗಿ ವಿಭಜಿಸಿದೆ. ಈ ನಡುವೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ತಮ್ಮ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಒಂದೊಂದಾಗಿ ಹಿಂದೆಗೆದುಕೊಳ್ಳುತ್ತಿದ್ದು, ಮಿಸ್ಟರ್ ಕ್ಲೀನ್ ಆಗಲು ಮುಂದಾಗಿದ್ದಾರೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಅವರು ಹೇಳಿದ್ದಾರೆ.