ಕಾರ್ಮಿಕ ಬಂಧು ಸ್ವಯಂ ಸೇವಕರನ್ನು ಖಾಯಂಗೊಳಿಸಿ: ರಾಜ್ಯ ಕಾರ್ಮಿಕ ಬಂಧು ಹಿತರಕ್ಷಣಾ ಸಂಘ ಒತ್ತಾಯ - Mahanayaka
7:26 PM Saturday 21 - December 2024

ಕಾರ್ಮಿಕ ಬಂಧು ಸ್ವಯಂ ಸೇವಕರನ್ನು ಖಾಯಂಗೊಳಿಸಿ: ರಾಜ್ಯ ಕಾರ್ಮಿಕ ಬಂಧು ಹಿತರಕ್ಷಣಾ ಸಂಘ ಒತ್ತಾಯ

banglore
13/09/2024

ಬೆಂಗಳೂರು: ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಕಾರ್ಮಿಕ ಸೇವಾ ಕೇಂದ್ರಗಳಿಂದ ತೆಗೆದುಹಾಕಿರುವ 1,123 ಕಾರ್ಮಿಕ ಬಂಧು ಸ್ವಯಂಸೇವಕರನ್ನು ಖಾಯಂ ಮಾಡಬೇಕು ಎಂದು ರಾಜ್ಯ ಕಾರ್ಮಿಕ ಬಂಧು ಹಿತರಕ್ಷಣಾ ಸಂಘ ಒತ್ತಾಯಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಂಗಸ್ವಾಮಿ, 2018ರ ಮಾ.17 ರಂದು 1,123 ಕಾರ್ಮಿಕರನ್ನು ಕಾರ್ಮಿಕ ಸೇವಾ ಕೇಂದ್ರಗಳಿ ಗಾಗಿ ನೇಮಿಸಿಕೊಂಡು, ದುಡಿಸಿಕೊಂಡಿದ್ದಾರೆ. ತದನಂತರ, 2023ರ ಸೆ.25ರಂದು ಸೇವಾ ಕೇಂದ್ರಗಳನ್ನು ರದ್ದುಗೊಳಿಸಿ, ಕೆಲಸದಿಂದ ವಜಾ ಮಾಡಲು ಆದೇಶ ನೀಡಿದೆ. ಇದರ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದೆಂದು ನ್ಯಾಯಾಲಯ ತಿಳಿಸಿದೆ.

ಆ ನಿಯಮವನ್ನು ಉಲ್ಲಂಘಿಸಿ, ಮತ್ತೊಮ್ಮೆ ಬೇರೆಯವರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿ ಕೊಳ್ಳಲು ಕಾರ್ಮಿಕ ಇಲಾಖೆ ಮುಂದಾಗಿದೆ. ಕಾರ್ಮಿಕರಿಗೆ ಬಾಕಿಯಿರುವ ಮೊತ್ತವನ್ನು ಪಾವತಿಸಬೇಕು. ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಬಂಧು ಸ್ವಯಂ ಸೇವಕ ರಂಗಸ್ವಾಮಿ, ವಕೀಲ ಪಿ. ಆರ್. ಸೋಮಶೇಖರಯ್ಯ, ವಕೀಲೆ ಗೀತಾ ಇತರರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ