ಡಿಬಾಸ್ ಅವರ “ಸ್ನೇಹನಾ ಪ್ರೀತಿನಾ” ಚಿತ್ರದ ನಟಿ ಈಗ ಹೇಗಾಗಿದ್ದಾರೆ ನೋಡಿ - Mahanayaka

ಡಿಬಾಸ್ ಅವರ “ಸ್ನೇಹನಾ ಪ್ರೀತಿನಾ” ಚಿತ್ರದ ನಟಿ ಈಗ ಹೇಗಾಗಿದ್ದಾರೆ ನೋಡಿ

13/03/2021

ಸಿನಿಡೆಸ್ಕ್: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ “ಸ್ನೇಹನಾ ಪ್ರೀತಿನಾ” ಸಿನಿಮಾದ ನಟಿ ಲಕ್ಷ್ಮೀ ರೈ ಇದೀಗ ಫ ಶೂಟ್ ಮೂಲಕ ಸುದ್ದಿಯಲ್ಲಿದ್ದಾರೆ. ಬೆಳಗಾವಿ ಮೂಲದ ನಟಿ ಲಕ್ಷ್ಮೀ ರೈ ಬರಳೆಣಿಕೆಯ ಚಿತ್ರಗಳಲ್ಲಿ ನಟಿಸಿದ್ದರೂ ಕೂಡ ಜನಪ್ರಿಯ ನಟಿಯಾಗಿದ್ದಾರೆ.

ಡಿಬಾಸ್ ಮಾತ್ರವಲ್ಲದೇ ಶಿವರಾಜ್ ಕುಮಾರ್ ನಟನೆಯ ವಾಲ್ಮೀಕಿ ಹಾಗೂ ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ನಟನೆಯ ಮಿಂಚಿನ ಓಟ,  ಉಪೇಂದ್ರ ಅವರ ಕಲ್ಪನಾ, ಕಿಶೋರ್ ನಟನೆಯ ಅಟ್ಟಹಾಸ ಚಿತ್ರಗಳಲ್ಲಿಯೂ ಲಕ್ಷ್ಮೀ ರೈ ನಟಿಸಿದ್ದಾರೆ.

2005ರಲ್ಲಿ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಲಕ್ಷ್ಮೀರೈ, ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಇಲ್ಲಿಯವರೆಗೆ ಒಟ್ಟು 50 ಚಿತ್ರಗಳಲ್ಲಿ ಇವರು ನಟಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ