ರಾಮನನ್ನು ಉತ್ತರ ಭಾರತದ ದೇವರೆಂದು ಬಿಂಬಿಸಲು ತಮಿಳುನಾಡಿನಲ್ಲಿ ಕಥೆ ಸೃಷ್ಟಿ: ರಾಜ್ಯಪಾಲರಿಂದಲೇ ಆರೋಪ
ರಾಮನನ್ನು ಉತ್ತರ ಭಾರತದ ದೇವರು ಎಂದು ಬಿಂಬಿಸಲು ರಾಜ್ಯದಲ್ಲಿ ಕಥೆಯನ್ನೇ ಸೃಷ್ಟಿಸಲಾಗಿದೆ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಆರೋಪಿಸಿದ್ದಾರೆ. ಸಾಂಸ್ಕೃತಿಕ ನರಮೇಧದ ಮೂಲಕ ಯುವಕರು ತಮ್ಮ ಸಾಂಸ್ಕೃತಿಕ ಪರಂಪರೆಯಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.
“ರಾಮ ಉತ್ತರ ಭಾರತದ ದೇವರು ಎಂಬ ನಿರೂಪಣೆ ಬೆಳೆಯಲು ಪ್ರಾರಂಭಿಸಿದೆ. ಅವನು ಇಲ್ಲಿಲ್ಲ. ತಮಿಳುನಾಡಿನ ಜನರಿಗೆ ರಾಮನ ಪರಿಚಯವಿಲ್ಲ” ಎಂದು ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಭಗವಾನ್ ರಾಮನ ಹೆಜ್ಜೆಗುರುತುಗಳಿಲ್ಲದ ಸ್ಥಳವು ತಮಿಳುನಾಡಿನಲ್ಲಿ ಇಲ್ಲ ಎಂದು ರಾಜ್ಯಪಾಲ ರವಿ ಹೇಳಿದ್ದು ಅವರು ಪ್ರತಿಯೊಬ್ಬ ವ್ಯಕ್ತಿಯ ಹೃದಯ ಮತ್ತು ಮನಸ್ಸಿನಲ್ಲಿ ವಾಸಿಸುತ್ತಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth