ಸಿಎಂ ಸಿದ್ದರಾಮಯ್ಯ ಇದ್ದ ವೇದಿಕೆಗೆ ನುಗ್ಗಿದ ಯುವಕ!
ಬೆಂಗಳೂರು: ವಿಧಾನಸೌಧದ ಮುಂಭಾಗದಲ್ಲೇ ಭದ್ರತಾ ಲೋಪ ನಡೆದಿರುವ ಘಟನೆ ಇಂದು ನಡೆದಿದ್ದು, ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಯುವಕನೊಬ್ಬ ಸಿಎಂ ಬಳಿ ನುಗ್ಗಲು ಯತ್ನಿಸಿದ್ದಾನೆ.
ಕಾರ್ಯಕ್ರಮದಲ್ಲಿ ಸಚಿವ ಮಹದೇವಪ್ಪ ಮಾತನಾಡುತ್ತಿದ್ದರು. ಈ ವೇಳೆ ಯುವಕನೊಬ್ಬ ಏಕಾಏಕಿ ವೇದಿಕೆ ಮುಂಭಾಗದಿಂದ ಹಾರಿ ವೇದಿಕೆ ಏರಿದ್ದಾನೆ. ಆತನ ಕೈಯಲ್ಲಿ ಒಂದು ಶಾಲು ಇತ್ತು. ಆತ ವೇದಿಕೆ ಏರುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿ ತಡೆದಿದ್ದಾರೆ. ಈ ವೇಳೆ ಕೈಯಲ್ಲಿದ್ದ ಶಾಲನ್ನು ವೇದಿಕೆಗೆ ಆತ ಎಸೆದಿದ್ದಾನೆ.
ಘಟನೆಯ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೂಡಲೇ ಆತನನ್ನು ವೇದಿಕೆಯಿಂದ ಎಳೆದೊಯ್ದ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಕರೆದುಕೊಂಡು ಹೋಗಿದ್ದಾರೆ.
ಇಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲೇ ಈ ಘಟನೆ ನಡೆದಿದೆ. ಸಿಎಂ ಅಂಗ ರಕ್ಷಕರು ಸರಿಯಾದ ಸಮಯಕ್ಕೆ ಎಚ್ಚೆತ್ತುಕೊಂಡು ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವೇದಿಕೆ ಹತ್ತಿದ ಯುವಕ ಯಾರು ಎನ್ನುವುದು ತಿಳಿದು ಬಂದಿಲ್ಲ. ಆತ ಯಾಕೆ ವೇದಿಕೆ ಏರಿದ ಎನ್ನುವುದು ತಿಳಿದು ಬಂದಿಲ್ಲ. ಯುವಕ ಕರ್ನಾಟಕದ ಬಾವುಟದ ಬಣ್ಣ ಇರುವ ಶಾಲು ಧರಿಸಿಕೊಂಡಿದ್ದ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: