ತನ್ನ ಪ್ರೇಯಸಿಯ ಸಮಾಧಿ ಬಳಿಯಲ್ಲೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ
26/10/2020
ಹೈದರಾಬಾದ್: ಪ್ರೇಯಸಿ ಸಾವನ್ನಪ್ಪಿದ ನೋವನ್ನು ಸಹಿಸಲಾಗದೇ, ಆಕೆಯ ಸಮಾಧಿ ಬಳಿಯಲ್ಲಿಯೇ ಪ್ರಿಯಕರ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾದೇವಾಪುರ್ ಮಂಡಲದ ಕುದುರುಪಲ್ಲಿ ಎಂಬಲ್ಲಿ ನಡೆದಿದೆ.
ಮಹೇಶ್ ಎಂಬ ಯುವಕ ಅದೇ ಗ್ರಾಮದ ಯುವತಿಯೊಬ್ಬಳನ್ನು ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ್ದ. ಆದರೆ ದುರದೃಷ್ಟವಶಾತ್ ಆ ಹುಡುಗಿ ಅನಾರೋಗ್ಯದಿಂದ ಮೃತಪಟ್ಟಿದ್ದಳು. ಇದರಿಂದಾಗಿ ತೀವ್ರವಾಗಿ ಮಹೇಶ್ ನೊಂದಿದ್ದ.
ತಾನು ಪ್ರೀತಿಸಿದ ಹುಡುಗಿ ಈ ರೀತಿಯಾಗಿ ಮೃತಪಟ್ಟಿರುವುದನ್ನು ಸಹಿಸಲಾಗದೇ ಚಡಪಡಿಸುತ್ತಿದ್ದ ಮಹೇಶ್ ಆಕೆಯ ಸಮಾಧಿ ಬಳಿಯಲ್ಲಿಯೇ ತಾನು ಕೂಡ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.