ಗಣೇಶ ವಿಸರ್ಜನೆಗೆ ತೆರಳಿದ್ದ ಮೂವರು ಕೆರೆಯಲ್ಲಿ ಮುಳುಗಿ ಸಾವು
16/09/2024
ತುಮಕೂರು: ಗಣೇಶನ ವಿಸರ್ಜನೆಗೆ ಹೋಗಿದ್ದ ಮೂವರು ನೀರಿನಲ್ಲಿ ಮುಳುಗಿ ಮೃತಾಪಟ್ಟಿರೋ ಘಟನೆ ಜಿಲ್ಲೆಯ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಮಾರಸಂದ್ರ ಗ್ರಾಮದಲ್ಲಿ ನಡೆದಿದೆ.
ಮಾರಸಂದ್ರ ಸಮೀಪ ರಂಗನಹಟ್ಟಿ ಕೆರೆಯಲ್ಲಿ ಘಟನೆ ನಡೆದಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಇದ್ರಲ್ಲಿ ಅಪ್ಪ ಮಕ್ಕಳು ಜಲಸಮಾಧಿಯಾಗಿದ್ದಾರೆ.
ಮೃತಪಟ್ಟವರನ್ನು ರೇವಣ್ಣ (50) ಪುತ್ರ ಶರತ್ (20), ದಯಾನಂದ (28) ಎಂದು ಗುರುತಿಸಲಾಗಿದೆ. ಮೃತ ದಯಾನಂದ್ ಗೆ ಇತ್ತೀಚೆಗೆ ಮದುವೆ ಆಗಿತ್ತು.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ದಂಡಿನ ಶಿವರ ಪೊಲೀಸರು ಭೇಟಿ ನೀಡಿದ್ದು ಮೃತದೇಹಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ. ಈ ಸಂಬಂಧ ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: