ಒಂದೆಡೆ ಒಂಟಿ ಸಲಗ, ಮತ್ತೊಂದೆಡೆ 25 ಆನೆಗಳ ಹಿಂಡು ಬೀಟಮ್ಮನ ಗ್ಯಾಂಗ್: ಬೇಲೂರಿನ ಜನ ಕಂಗಾಲು
ಹಾಸನ: ಒಂದೆಡೆ ಒಂಟಿ ಸಲಗದ ಉಪಟಳ ಇನ್ನೊಂದೆಡೆ ಗ್ರಾಮದೊಳಗೆ ಕಾಡಾನೆಗಳ ಹಿಂಡು ಓಡಾಟದಿಂದ ಬೇಲೂರು ತಾಲೂಕಿನ ಬಿಕ್ಕೋಡು ಗ್ರಾಮದ ಜನತೆ ಕಂಗಾಲಾಗಿದ್ದಾರೆ.
ಬೇಲೂರು ತಾಲೂಕಿನಲ್ಲಿ ಆನೆಗಳ ಗುಂಪು ಬೀಟಮ್ಮನ ಗ್ಯಾಂಗ್ ಹಾವಳಿ ಹೆಚ್ಚಾಗಿದೆ. ಗಜಪಡೆ ಗ್ರಾಮದೊಳಗೆ ನುಗ್ಗುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಅಲ್ಲದೇ ರೈತರಂತೂ ಆನೆಯ ದಾಳಿಗಳಿಂದ ಕಂಗಾಲಾಗಿದ್ದಾರೆ.
ಜಮೀನು, ಕಾಫಿ ತೋಟಕ್ಕೆ ತೆರಳಲು ರೈತರು, ಕಾರ್ಮಿಕರು ಭಯಪಡುವಂತಾಗಿದೆ. ಸುಮಾರು 25ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಕಾಡಾನೆಗಳು ದಂಡು ಗ್ರಾಮಕ್ಕೆ ಎಂಟ್ರಿಕೊಡುತ್ತಿದ್ದು, ಭತ್ತ, ಅಡಿಕೆ, ಬಾಳೆ, ಕಾಫಿ ಬೆಳೆಗಳನ್ನು ನಾಶಪಡಿಸಿವೆ.
ಇನ್ನೂ ಕಾಡಾನೆಗಳ ಹಿಂಡು ಗ್ರಾಮಕ್ಕೆ ನುಗ್ಗಿರುವ ಬೆನ್ನಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಆನೆಗಳ ಗಿಂಡಿನ ಮೇಲೆ ಕಣ್ಣಿಟ್ಟಿದ್ದು, ಗ್ರಾಮಸ್ಥರಿಗೆ ಮೈಕ್ ಮೂಲಕ ಪ್ರಕಟಣೆ ನೀಡುತ್ತಾ ಎಚ್ಚರಿಸುತ್ತಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: