ರೇಣುಕಾಸ್ವಾಮಿ ಪ್ರಾಣ ಭಿಕ್ಷೆ ಬೇಡುತ್ತಿರುವ ಫೋಟೋ ನಿಜ ಅಲ್ವಾ?: ಇಲ್ಲಿದೆ ಹೊಸ ಟ್ವಿಸ್ಟ್ - Mahanayaka
7:16 AM Thursday 12 - December 2024

ರೇಣುಕಾಸ್ವಾಮಿ ಪ್ರಾಣ ಭಿಕ್ಷೆ ಬೇಡುತ್ತಿರುವ ಫೋಟೋ ನಿಜ ಅಲ್ವಾ?: ಇಲ್ಲಿದೆ ಹೊಸ ಟ್ವಿಸ್ಟ್

renukaswamy
18/09/2024

ಬೆಂಗಳೂರು: ರೇಣುಕಾಸ್ವಾಮಿ ಪ್ರಾಣ ಭಿಕ್ಷೆ ಬೇಡುತ್ತಿರುವ ಫೋಟೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಫೋಟೋ ‘ಎಐ’ ಕ್ರಿಯೇಟೆಡ್ ಫೋಟೋ ಎನ್ನುವ ಆರೋಪ ಕೇಳಿ ಬಂದಿದೆ.

ವಿನಯ್ನ ಐಫೋನ್ ಮೊಬೈಲ್‌ನಲ್ಲಿ ರೇಣುಕಾಸ್ವಾಮಿ ಫೋಟೊಗಳು ಪತ್ತೆಯಾಗಿದ್ದವು. ವರದಿಗಳ ಪ್ರಕಾರ, ಈ ಫೋಟೋಗಳು ಎಐ ಕ್ರಿಯೇಟೆಡ್ ಫೋಟೋಗಳು ಎಂದು ಆರೋಪಿಗಳು ಆರೋಪಿಸಿದ್ದಾರೆನ್ನಲಾಗಿದೆ.

ವಿನಯ್ ಮೊಬೈಲ್ ಮತ್ತೆ ಎಫ್‌ಎಸ್‌ಎಲ್‌ಗೆ ಕಳಿಸಲು ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ವಿನಯ್ ಮೊಬೈಲ್‌ನಲ್ಲಿ ಸಿಕ್ಕಿದ್ದ ಫೋಟೊಗಳ ಮರುಪರೀಕ್ಷೆಗೆ ತಯಾರಿ ನಡೆದಿದೆ ಎನ್ನಲಾಗಿದೆ.

ರೇಣುಕಾಸ್ವಾಮಿ ಹತ್ಯೆಗೂ ಮುನ್ನ ಅಂಗಲಾಚಿ ಬೇಡುತ್ತಿರುವ ಫೋಟೋ ಇದು ಎಂದು ಎಂದು ಮಾಧ್ಯಮಗಳಲ್ಲಿ ಕೂಡ ವ್ಯಾಪಕ ಫೋಟೋ ವೈರಲ್ ಆಗಿತ್ತು. ಈ ಫೋಟೋ ಇದೀಗ ಎಐ ಕ್ರಿಯೇಟೆಡ್ ಫೋಟೋಸ್ ಅನ್ನೋ ಆರೋಪ ಕೇಳಿ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ