ಯುವತಿಯ ವಿಡಿಯೋ ಬಗ್ಗೆ ರಮೇಶ್ ಜಾರಕಿಹೊಳಿ ಹೇಳಿದ್ದೇನು?
13/03/2021
ಬೆಂಗಳೂರು: ರಮೇಶ್ ಜಾರಕಿಹೊಳಿ ತನಗೆ ಕೆಲಸ ಕೊಡಿಸುವುದಾಗಿ ವಂಚಿಸಿದ್ದಾರೆ ಎಂದು ಯುವತಿ ವಿಡಿಯೋ ಸಂದೇಶದ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ, ಈ ವಿಡಿಯೋ ಷಡ್ಯಂತ್ರದ ಭಾಗವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಅವರು ಇಂದು ದೂರು ದಾಖಲಿಸಿದ್ದು, ಇದರ ಬೆನ್ನಲ್ಲೇ ಪೊಲೀಸರು ಎಫ್ ಐಆರ್ ದಾಖಲಿಸಿದ್ದು, ಇದರ ಬೆನ್ನಲ್ಲೇ ಸಂತ್ರಸ್ತ ಯುವತಿ ವಿಡಿಯೋ ಸಂದೇಶ ಬಿಡುಗಡೆಗೊಳಿದ್ದಾರೆ.
ಯುವತಿ ವಿಡಿಯೋ ಬಿಡುಗಡೆ ಮಾಡಿರುವ ಬಗ್ಗೆ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಆದರೆ, ಇದೇ ಸಂದರ್ಭದಲ್ಲಿ, ವಿಡಿಯೋ ಬಿಡುಗಡೆಯಾಗಿ 12 ದಿನಗಳಾಗಿವೆ. ದೂರು ನೀಡಿದ ದಿನದಂದೇ ಅವರು ಏಕೆ ವಿಡಿಯೋ ಸಂದೇಶ ನೀಡಿದ್ದಾರೆ? ಇದು ಷಡ್ಯಂತ್ರದ ಭಾಗವಾಗಿದೆ ಎಂದಷ್ಟೇ ಹೇಳಿದರು.