ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡುಗೈ ದಾನಿ ಸಿ.ಟಿ.ಪೂವಯ್ಯ
ಕೊಟ್ಟಿಗೆಹಾರ: ಬಣಕಲ್ ಸಮೀಪದ ಚೇಗು ನಿವಾಸಿ ಹಿರಿಯ ರಾಜಕಾರಣಿ, ಮುಖಂಡ ಸಿ.ಟಿ.ಪೂವಯ್ಯ (92)ಬುಧವಾರ ರಾತ್ರಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಮೃತರಿಗೆ ಇಬ್ಬರು ಪುತ್ರರಿದ್ದಾರೆ. ಪೂವಯ್ಯ ಅವರು ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎರಡನೇ ಅಧ್ಯಕ್ಷರಾಗಿ 1976 ರಲ್ಲಿ ಕಾರ್ಯ ನಿರ್ವಹಿಸಿದ್ದರು.
ಮಹಾಮ್ಮಾಯಿ ದೇವಸ್ಥಾನದ ಸಮಿತಿ ಅಧ್ಯಕ್ಷರಾಗಿ, ವಿದ್ಯಾಭಾರತಿ ಶಾಲೆಯ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.ಮೂಡಿಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ,ಜಿಲ್ಲಾ ಸತ್ಯಸಾಯಿ ಸಂಸ್ಥೆಯ ಪದಾಧಿಕಾರಿಯಾಗಿ ಹಾಗೂ ಕಾಂಗ್ರೆಸ್ ಪಕ್ಷದ ಪದಾಧಿಕಾರಿಯಾಗಿಯೂ ಗುರುತಿಸಿಕೊಂಡಿದ್ದರು.
ಚೇಗು ಗ್ರಾಮಸ್ಥರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಕೊಡುಗೈ ದಾನಿಯಾಗಿದ್ದರು. ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದರು.ಇವರ ಮೃತ ದೇಹವನ್ನು ಹಾಸನದ ಆಯುರ್ವೇದ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕುಟುಂಬದವರು ದಾನವಾಗಿ ನೀಡಿರುತ್ತಾರೆ.
ಮೃತ ದೇಹದ ಅಂತಿಮ ಯಾತ್ರೆಯು ಬಣಕಲ್ ರಾಜಬೀದಿಯಲ್ಲಿ ನಡೆಯಿತು. ವರ್ತಕರು ಅಂಗಡಿ ಮುಂಗಟ್ಟುಮುಚ್ಚಿ ಬಣಕಲ್ ಪೇಟೆಯಲ್ಲಿ ಮೆರವಣಿಗೆ ನಡೆಸುವ ಮೂಲಕ ನೆರವೇರಿತು. ಗ್ರಾಮಸ್ಥರು ವರ್ತಕರು ಮೃತ ದೇಹ ಸಾಗಿಸುತ್ತಿರುವ ಅಂಬುಲೆನ್ಸ್ ಮೇಲೆ ಹೂ ಅರ್ಚಿಸುವ ಮೂಲಕ ಶೃದ್ದಾಂಜಲಿ ಕೋರಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: