ಪ್ಯಾಲೆಸ್ಟೀನ್ ಧ್ವಜ ಹಿಡಿಯುವುದರಲ್ಲಿ ತಪ್ಪೇನೂ ಇಲ್ಲ: ಸಚಿವ ಜಮೀರ್ ಅಹಮದ್ ಖಾನ್ ಹೇಳಿದ್ದೇನು?
ಕಲಬುರಗಿ: ಪ್ಯಾಲೆಸ್ಟೀನ್ ಧ್ವಜ ಹಿಡಿಯುವುದರಲ್ಲಿ ತಪ್ಪೇನೂ ಇಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಹೇಳಿಕೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಯುವಕರು ಪ್ಯಾಲೆಸ್ಟೀನ್ ಬಾವುಟ ಹಿಡಿದು ಓಡಾಡಿದ ಬಗ್ಗೆ ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರವೇ ಪ್ಯಾಲೆಸ್ಟೀನ್ ಗೆ ಬೆಂಬಲ ಘೋಷಿಸಿದೆ. ಕೇಂದ್ರ ಸರ್ಕಾರವೇ ಬೆಂಬಲ ಕೊಟ್ಟಿದ್ದರಿಂದ ಧ್ವಜ (ಪ್ಯಾಲೆಸ್ಟೀನ್) ಹಿಡಿದುಕೊಂಡಿದ್ದಾರೆ. ಬೇರೆ ದೇಶಕ್ಕೆ ಜೈಕಾರ ಹಾಕಿದರೆ ತಪ್ಪು. ಅವರದ್ದೇ (ಕೇಂದ್ರ ಸರ್ಕಾರ) ಬೆಂಬಲ ಇದ್ದಾಗ ಧ್ವಜ ಹಿಡಿಯುವುದರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ.
ಬೇರೆ ಯಾವುದಾದರೂ ದೇಶಕ್ಕೆ ಜೈಕಾರ ಹಾಕಿದರೆ ದೇಶದ್ರೋಹ ಆಗುತ್ತದೆ. ಅಂತಹ ಘೋಷಣೆ ಕೂಗಿದವರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಕೇಂದ್ರ ಸರ್ಕಾರ ಪ್ಯಾಲೆಸ್ಟೀನ್ ಗೆ ಬೆಂಬಲಿಸದಿದ್ದರೆ ಯಾರು ಧ್ವಜ ಹಿಡಿದುಕೊಳ್ಳುತ್ತಿದ್ದರು? ಬೆಂಬಲ ಇದೆ ಎಂಬ ಕಾರಣಕ್ಕೆ ತಾನೇ ಅವರೂ ಧ್ವಜ ಹಿಡಿದಿದ್ದು ಎಂದು ಬಲವಾಗಿ ಸಮರ್ಥಿಸಿಕೊಂಡರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: