ಕೆಲಸದ ಒತ್ತಡದಿಂದ ಯುವತಿ ಸಾವು ಪ್ರಕರಣ: 'ನಿದ್ರೆ ಬರುತ್ತಿಲ್ಲ, ಸರಿಯಾದ ಆಹಾರವನ್ನು ತಿನ್ನಲು ಸಾಧ್ಯವಾಗುತ್ತಿಲ್ಲ' ಎಂದ ಉದ್ಯೋಗಿಯ ತಂದೆ - Mahanayaka
9:44 AM Friday 20 - September 2024

ಕೆಲಸದ ಒತ್ತಡದಿಂದ ಯುವತಿ ಸಾವು ಪ್ರಕರಣ: ‘ನಿದ್ರೆ ಬರುತ್ತಿಲ್ಲ, ಸರಿಯಾದ ಆಹಾರವನ್ನು ತಿನ್ನಲು ಸಾಧ್ಯವಾಗುತ್ತಿಲ್ಲ’ ಎಂದ ಉದ್ಯೋಗಿಯ ತಂದೆ

20/09/2024

26 ವರ್ಷದ ಯುವತಿ ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಎಂಬಾಕೆ ಕೆಲಸದ ಒತ್ತಡದಿಂದ ಸಾವನ್ನಪ್ಪಿದ್ದಾರೆ. ಈ ಘಟನೆಯಿಂದ ನನಗೆ ನಿದ್ರೆ ಬರುತ್ತಿಲ್ಲ ಮತ್ತು ಸರಿಯಾದ ಆಹಾರವನ್ನು ಸೇವಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕೆಯ ತಂದೆ ಸಿಬಿ ಜೋಸೆಫ್ ಸುದ್ದಿ ಸಂಸ್ಥೆ ಐಎಎನ್ಎಸ್ ಗೆ ತಿಳಿಸಿದ್ದಾರೆ. ಇವರು ಪುತ್ರಿ ಪೆರಾಯಿಲ್ ಗೆ ಕೆಲಸ ಬಿಡಲು ಸಲಹೆ ನೀಡಿದ್ದರು. ಆದರೆ ಆಕೆ ‘ಕೆಲಸವನ್ನು ಮುಂದುವರಿಸುವುದಾಗಿ ಹೇಳಿದ್ದರು. ಯಾಕೆಂದರೆ ಇದು ಪ್ರತಿಷ್ಠಿತ ಸಂಸ್ಥೆಯಾಗಿದೆ ಎಂದಿದ್ದಳು’ ಯುವತಿಯ ತಂದೆ ಹೇಳಿದ್ದಾರೆ.

‘ಬಜಾಜ್ ಆಟೋ ಕಂಪನಿಯ ಲೆಕ್ಕಪರಿಶೋಧನೆಯಲ್ಲಿ ತೊಡಗಿದ್ದ‌ ನನ್ನ ಮಗಳು ಪ್ರತಿದಿನ ಮಧ್ಯರಾತ್ರಿಯವರೆಗೆ ಕೆಲಸ ಮಾಡುತ್ತಿದ್ದಳು. ಮುಂಜಾನೆ 1.30 ರ ವೇಳೆಗೆ ತನ್ನ ಪೇಯಿಂಗ್ (ಅತಿಥಿ) ವಸತಿಗೃಹಕ್ಕೆ ಮರಳುತ್ತಿದ್ದಳು” ಎಂದು ಆಕೆಯ ತಂದೆ ಹೇಳಿದ್ದಾರೆ.

ಅವಳು ಈ ಬಗ್ಗೆ ಆಗಾಗ್ಗೆ ದೂರು ನೀಡುತ್ತಿದ್ದಳು. ಅದು ಒಂದು ಹಂತವನ್ನು ತಲುಪಿತು. ನಾವು ಅವಳಿಗೆ ಕೆಲಸ ಬಿಡಲು ಹೇಳಿದ್ರೂ ಆಕೆ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಹೇಳಿದಳು. ಜುಲೈನಲ್ಲಿ ನಾವು ಅವಳನ್ನು ಹೃದ್ರೋಗ ತಜ್ಞರ ಬಳಿಗೆ ಕರೆದೊಯ್ದೆವು ಮತ್ತು ತಪಾಸಣೆಯ ನಂತರ, ಅವಳು ಆರೋಗ್ಯವಾಗಿದ್ದಾಳೆ. ಆದರೆ ಸರಿಯಾದ ನಿದ್ರೆ ಮತ್ತು ಸರಿಯಾದ ಆಹಾರದ ಕೊರತೆಯಿದೆ ಎಂದು ಅವರು ಹೇಳಿದರು” ಎಂದು ತಂದೆ ಜೋಸೆಫ್ ಐಎಎನ್ಎಸ್ ಗೆ ತಿಳಿಸಿದ್ದಾರೆ.


Provided by

ತಮ್ಮ ಮಗಳು ಮೃತಪಟ್ಟಿದ್ದರೂ, ಬೇರೆ ಯಾವುದೇ ವ್ಯಕ್ತಿಗೆ ಇಂತಹ ಅನುಭವ ಆಗಬಾರದು ಎಂದು ತಮ್ಮ ಪತ್ನಿ, ಇವೈ ಇಂಡಿಯಾ ಅಧ್ಯಕ್ಷ ರಾಜೀವ್ ಮೆಮಾನಿ ಅವರಿಗೆ ಪತ್ರ ಬರೆದಿದ್ದಾರೆ ಅಂದರು.

“ನಾವು ಕಂಪನಿಯ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಹೋಗುವುದಿಲ್ಲ” ಎಂದು ಅವರು ಹೇಳಿದರು.

ಅನ್ನಾ ಪೆರಾಯಿಲ್ ಅವರ ಸಾವಿಗೆ “ಕೆಲಸದ ಒತ್ತಡ” ಕಾರಣವಾಯಿತು ಎಂಬ ಯಾವುದೇ ಆರೋಪವನ್ನು ಮೆಮಾನಿ ನಿರಾಕರಿಸಿದ್ದಾರೆ. ಇವೈ ದೇಶಾದ್ಯಂತ ಸುಮಾರು 100,000 ಉದ್ಯೋಗಿಗಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. “ಪ್ರತಿಯೊಬ್ಬರೂ ಕಷ್ಟಪಟ್ಟು ಕೆಲಸ ಮಾಡಬೇಕು ಎಂಬುದರಲ್ಲಿ ಯಾವುದೇ ಮಾತಿಲ್ಲ. ಆದರೆ ಕೆಲಸದ ಒತ್ತಡವು ಅವಳ ಜೀವವನ್ನು ಬಲಿ ತೆಗೆದುಕೊಳ್ಳಬಹುದೆಂದು ನಾವು ನಂಬುವುದಿಲ್ಲ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ