ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ
ಬೆಳ್ತಂಗಡಿ: ದಯಾ ವಿಶೇಷ ಶಾಲೆಯಲ್ಲಿ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಬೆಳ್ತಂಗಡಿಯ ಜ್ಯೋತಿ ಆಸ್ಪತ್ರೆ ಸಹಯೋಗದಲ್ಲಿ ಸೆ.19ರಂದು ನಡೆಯಿತು.
ಆಸ್ಪತ್ರೆಯ ಆಡಳಿತಾಧಿಕಾರಿ ಸಿಸ್ಟರ್.ಮೆರಿಟ್, ಡಾ.ಸಿಸ್ಟರ್.ಜೆನಿಫರ್, ವೈದ್ಯಾಧಿಕಾರಿಗಳು, ಡಾ.ನವ್ಯಾ ಪೌಲ್, ವೈದ್ಯಾಧಿಕಾರಿಗಳು, ಜೆಸಿಂತಾ ತೌರೋ, ಲೆಕ್ಕಿಗರು, ಸಿಸ್ಟರ್. ದನಿಶಾ ಶುಶ್ರೂಷಕಿ, ಹಾಗೂ ರಂಜಿತ್ ಪಿ.ಆರ್.ಒ ಮುಂತಾದವರು ಭಾಗವಹಿಸಿ ಮಕ್ಕಳ ಆರೋಗ್ಯ ತಪಾಸಣೆಯನ್ನು ನಡೆಸಿಕೊಟ್ಟರು.
ದಯಾ ಶಾಲೆಯ ಸಂಚಾಲಕರಾದ ವಂ.ಫಾ.ವಿನೋದ್ ಮಸ್ಕರೇನಸ್ ರವರು ಆಗಮಿಸಿದ ವೈದ್ಯಕೀಯ ತಂಡವನ್ನು ಸ್ವಾಗತಿಸಿ, ಕಾರ್ಯಕ್ರಮಕ್ಕೆ ಶುಭಕೋರಿದರು.
ಈ ಶಿಬಿರದಲ್ಲಿ ಶಾಲೆಯ 82 ಮಕ್ಕಳು ಭಾಗವಹಿಸಿ ಸೂಕ್ತ ಚಿಕಿತ್ಸೆ ಹಾಗೂ ವೈದ್ಯರ ಸಲಹೆ ಸೂಚನೆಗಳನ್ನು ಪಡೆದುಕೊಂಡರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: