ಶಾಲೆಯ ಶೌಚಾಲಯ ಬಳಿ ಪತ್ತೆಯಾದ ಬೃಹತ್ ಕಾಳಿಂಗ ಸರ್ಪ ಪತ್ತೆ: ಬೆಚ್ಚಿಬಿದ್ದ ಜನ
ಕೊಟ್ಟಿಗೆಹಾರ: ಇಲ್ಲಿನ ಅತ್ತಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದ ಒಳಗೆ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿ ಜನರು ಭಯಭೀತರಾದರು.
ಶುಕ್ರವಾರ ಸಂಜೆ ಶಾಲೆ ಬಿಟ್ಟ ನಂತರ ಕಾಳಿಂಗ ಸರ್ಪ ಶಾಲೆಯ ಶೌಚಾಲಯ ಬಳಿ ಅಡಗಿದ್ದನ್ನು ಸಾರ್ವಜನಿಕರು ನೋಡಿ ಉರಗ ಪ್ರೇಮಿ ಬಣಕಲ್ ಮೊಹಮ್ಮದ್ ಆರೀಫ್ ಅವರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಕೂಡಲೇ ಬಂದ ಸ್ನೇಕ್ ಆರೀಫ್ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ ಬಳಿಕ 15 ಅಡಿ ಉದ್ದ ಕಾಳಿಂಗ ಸರ್ಪ ಸೆರೆ ಹಿಡಿದರು. ಶಾಲೆಯ ಮಕ್ಕಳಿದ್ದ ಸಮಯದಲ್ಲಿ ಕಾಳಿಂಗ ಸರ್ಪ ಯಾರಿಗೂ ಕಾಣಿಸದ ಕಾರಣ ದೊಡ್ಡ ಅಪಾಯ ಸಂಭವಿಸುವುದು ತಪ್ಪಿದಂತಾಗಿದೆ.
ಕಾಳಿಂಗ ಸರ್ಪ(King Cobra)ವನ್ನು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿ ಸೆರೆ ಹಿಡಿದು ಚಾರ್ಮಾಡಿ ಅರಣ್ಯಕ್ಕೆ ಬಿಡಲಾಯಿತು. ಕಾರ್ಯಾಚರಣೆ ವೇಳೆ ನೂರಾರು ಮಂದಿ ಜಮಾಯಿಸಿ ಕಾಳಿಂಗ ಸರ್ಪವನ್ನು ವೀಕ್ಷಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: