ಸ್ವತಂತ್ರ ಫೆಲೆಸ್ತೀನ್ ಬೇಕು: ಅಲ್ಲಿಯವರೆಗೂ ಇಸ್ರೇಲ್ ಜತೆ ಸಂಬಂಧ ಇಲ್ಲ ಎಂದ ಸೌದಿ ಅರೇಬಿಯಾ - Mahanayaka

ಸ್ವತಂತ್ರ ಫೆಲೆಸ್ತೀನ್ ಬೇಕು: ಅಲ್ಲಿಯವರೆಗೂ ಇಸ್ರೇಲ್ ಜತೆ ಸಂಬಂಧ ಇಲ್ಲ ಎಂದ ಸೌದಿ ಅರೇಬಿಯಾ

20/09/2024

ಪಶ್ಚಿಮ ಜೆರುಸಲೇಮನ್ನು ಕೇಂದ್ರವಾಗಿಟ್ಟುಕೊಂಡು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣವಾಗುವವರೆಗೆ ಇಸ್ರೇಲ್ ನೊಂದಿಗೆ ಯಾವುದೇ ರೀತಿಯ ರಾಜತಾಂತ್ರಿಕ ಸಂಬಂಧವನ್ನು ಏರ್ಪಡಿಸುವುದಿಲ್ಲ ಎಂದು ಸೌದಿ ಅರೇಬಿಯಾ ಖಡಕ್ಕಾಗಿ ಹೇಳಿದೆ. ಸೌದಿ ಶೂರ ಕೌನ್ಸಿಲ್ ನ ಒಂಬತ್ತನೇ ಸಮ್ಮೇಳನದಲ್ಲಿ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆ ಮತ್ತು ಜಗತ್ತಿನ ಎಲ್ಲಾ ರಾಷ್ಟ್ರಗಳ ಆಗ್ರಹವನ್ನು ಕಡೆಗಣಿಸಿ ಫೆಲಸ್ಥಿನ್ ಮೇಲೆ ಇಸ್ರೇಲ್ ದಾಳಿ ಮಾಡುತ್ತಿದೆ. ಇದನ್ನು ಸೌದಿ ಪ್ರಬಲವಾಗಿ ಖಂಡಿಸುತ್ತದೆ. ಫೆಲೆಸ್ಥಿನ್ ಸಮಸ್ಯೆಯು ಸೌದಿಯ ಆದ್ಯತಾ ಪಟ್ಟಿಯ ಮುಂಚೂಣಿಯಲ್ಲಿದೆ ಎಂದು ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ