ಊಟದ ವಿಷಯಕ್ಕೆ ಧನಂಜಯ–ಕಂಜನ್ ಆನೆಗಳ ಹೊಡೆದಾಟ: ಅರಮನೆಯಿಂದ ಗುದ್ದಾಡುತ್ತಾ ರಸ್ತೆಗೆ ಬಂದ ಆನೆಗಳು
ಮೈಸೂರು: ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲು ಆಗಮಿಸಿದ್ದ ಆನೆಗಳ ನಡುವೆ ಭಾರೀ ಗಲಾಟೆ ನಡೆದ ಘಟನೆ ಶುಕ್ರವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ನಡೆದಿದೆ.
ರಾತ್ರಿ ಊಟದ ಸಮಯದಲ್ಲಿ ಧನಂಜಯ ಮತ್ತು ಕಂಜನ್ ಆನೆ ನಡುವೆ ಗಲಾಟೆ ನಡೆದಿದೆ. ಗಲಾಟೆ ವೇಳೆ ರೊಚ್ಚಿಗೆದ್ದ ಧನಂಜಯ ಕಂಜನ್ ಆನೆಯನ್ನು ಅಟ್ಟಾಡಿಸಿ ಹೊಡೆದಿದ್ದಾನೆ.
ಧನಂಜಯನ ಏಟಿಗೆ ಮಾವುತನಿಲ್ಲದ ಕಂಜನ್ ಆನೆ ಅರಮನೆಯಿಂದ ಹೊರಗೆ ಓಡಿದೆ. ಈ ವೇಳೆ ಧನಂಜಯ ಆನೆಯ ಮೇಲೆ ಮಾವುತನಿದ್ದುದರಿಂದ ಧನಂಜಯನನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಯಿತು.
ಸದ್ಯ ಧನಂಜಯ , ಕಂಜನ್ ನನ್ನು ಅರಮನೆಯಿಂದು ಹೊರಗೆ ಓಡಿಸಿಕೊಂಡು ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಅರಮನೆ ಜಯ ಮಾರ್ತಾಂಡ ಮುಖ್ಯದ್ವಾರದ ಪಕ್ಕದ ಕೋಡಿ ಸೋಮೇಶ್ವರ ದೇಗುಲದ ದ್ವಾರದಿಂದ ಗುದ್ದಾಡುತ್ತಾ ಹೊರಬಂದ ಆನೆ, ದೊಡ್ಡಕೆರೆ ಮೈದಾನ ಬಳಿ ಬ್ಯಾರಿಕೇಡ್ ತಳ್ಳಿಕೊಂಡು ರಸ್ತಗೆ ಬಂದಿದೆ. ಏಕಾಏಕಿ ಆನೆಗಳ ಆಗಮನದಿಂದ ಬೆಚ್ಚಿಬಿದ್ದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: