ಪ್ರಿಯಕರ ಬಚ್ಚಿಟ್ಟ ಸತ್ಯ ತಿಳಿದು ನೊಂದ ಯುವತಿಯಿಂದ  ಆತ್ಮಹತ್ಯೆ - Mahanayaka

ಪ್ರಿಯಕರ ಬಚ್ಚಿಟ್ಟ ಸತ್ಯ ತಿಳಿದು ನೊಂದ ಯುವತಿಯಿಂದ  ಆತ್ಮಹತ್ಯೆ

14/03/2021

ಹೈದರಾಬಾದ್: ಪ್ರಿಯಕರ ಬಚ್ಚಿಟ್ಟ ಸತ್ಯ ತಿಳಿದು ನೊಂದ ಯುವತಿಯೋರ್ವಳು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ನಡೆದಿದ್ದು, ತನ್ನ ಪ್ರಿಯಕರನ ಅಸಲಿಯತ್ತು ಬಯಲಾದ ಬೆನ್ನಲ್ಲೇ ಯುವತಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.

ಮಲಬಂಜಾರಾ ಗ್ರಾಮದ 24 ವರ್ಷ ವಯಸ್ಸಿನ ರತ್ನಕುಮಾರಿ ಆಟೋ ಚಾಲಕ ಸಂಜಯ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಸಂಜಯ್ ಗೆ ಮೊದಲೇ ಮದುವೆಯಾಗಿತ್ತು. ಈ ವಿಚಾರವನ್ನು ಸಂಜಯ್ ಮುಚ್ಚಿಟ್ಟಿದ್ದ.

ಸಂಜಯ್ ಗೆ ಮದುವೆಯಾಗಿದೆ ಎನ್ನುವ ವಿಚಾರ ಹೇಗೋ ಯುವತಿಗೆ ತಿಳಿದಿದೆ. ತನ್ನ ಪ್ರೀತಿಯ ಬಗ್ಗೆ ನೂರಾರು ಕನಸು ಕಂಡಿದ್ದ ರತ್ನ ಕುಮಾರಿ, ಈ ಘೋರ ವಂಚನೆಯನ್ನು ಸಹಿಸಲು ಸಾಧ್ಯವಾಗದೇ ಮಾರ್ಚ್ 9 ರಂದು ತಾನು ಕೆಲಸ ಮಾಡುತ್ತಿದ್ದ  ಖಮ್ಮಮ್ ನ ದೋನಿಖಾನೆಯಿಂದ ಗ್ರಾಮಕ್ಕೆ ತೆರಳಿದ್ದು, ಮಾರ್ಚ್ 10ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಯುವತಿ ಕೀಟನಾಶಕ ಸೇವಿಸಿ ಅಸ್ವಸ್ಥಳಾಗಿರುವುದನ್ನು ಗಮನಿಸಿದ  ಕುಟುಂಬಸ್ಥರು ತಕ್ಷಣವೇ ಯುವತಿಯನ್ನು  ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಸದ್ಯ ಸಂಜಯ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

ಇತ್ತೀಚಿನ ಸುದ್ದಿ