ಜ್ಯುವೆಲ್ಲರಿ ಸ್ಟೋರ್ ದರೋಡೆ ಪ್ರಕರಣ: ಎರಡನೇ ಆರೋಪಿ ಪೊಲೀಸ್ ಎನ್ ಕೌಂಟರ್ ನಲ್ಲಿ ಸಾವು
ಸುಲ್ತಾನ್ ಪುರ ಆಭರಣ ಅಂಗಡಿ ದರೋಡೆ ಪ್ರಕರಣದ ಎರಡನೇ ಆರೋಪಿಯನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ ಸೋಮವಾರ ಉನ್ನಾವೊದಲ್ಲಿ ಎನ್‌ಕೌಂಟರ್ ನಲ್ಲಿ ಗುಂಡಿಕ್ಕಿ ಕೊಂದಿದೆ.
ಉನ್ನಾವೊ ಜಿಲ್ಲೆಯ ಅಚಲ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಎನ್‌ಕೌಂಟರ್ ನಡೆದಿದೆ.
ಎನ್‌ಕೌಂಟರ್ ಸಮಯದಲ್ಲಿ ಓರ್ವ ಆರೋಪಿ ಗಾಯಗೊಂಡರೆ, ಇನ್ನೊಬ್ಬ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಗಾಯಗೊಂಡವರನ್ನು ಅಮೇಥಿ ಜಿಲ್ಲೆಯ ಮೋಹನ್ಗಂಜ್ ಪೊಲೀಸ್ ಠಾಣೆಯ ಜನಾಪುರ ಗ್ರಾಮದ ನಿವಾಸಿ ಧರ್ಮರಾಜ್ ಸಿಂಗ್ ಅವರ ಪುತ್ರ ಅನುಜ್ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ.
ತಕ್ಷಣ ಗಾಯಾಳುವನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಪ್ರಾಥಮಿಕ ಚಿಕಿತ್ಸೆ ಬಳಿಕ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದರು.
ವಿಧಿವಿಜ್ಞಾನ ತಂಡ ಮತ್ತು ಅಚಲ್ಗಂಜ್ ಪೊಲೀಸರು ತನಿಖೆ ನಡೆಸುವುದರೊಂದಿಗೆ ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ.
ಸೆಪ್ಟೆಂಬರ್ 5 ರಂದು, ವಿಶೇಷ ಕಾರ್ಯಪಡೆ (ಎಸ್ಟಿಎಫ್) ಮತ್ತೊಬ್ಬ ಆರೋಪಿ ಮಂಗೇಶ್ ಯಾದವ್ ಅವರನ್ನು ಕೊಂದು, ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಈ ಎನ್ ಕೌಂಟರ್ ಅನ್ನು “ನಕಲಿ” ಎಂದು ಕರೆದಿತ್ತು. ಇದು ರಾಜಕೀಯ ವಿವಾದವನ್ನು ಹುಟ್ಟುಹಾಕಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth