ವೃದ್ಧ ದಂಪತಿಯ ಜೀವನಾಂಶ ಕದನ: ‘ಕಲಿಯುಗ ಬಂದಂತೆ ತೋರುತ್ತಿದೆ’ ಎಂದ ನ್ಯಾಯಾಲಯ
ಅಲಹಾಬಾದ್ ಹೈಕೋರ್ಟ್ 76 ಮತ್ತು 80 ವರ್ಷದ ವೃದ್ಧ ದಂಪತಿಯ ಜೀವನಾಂಶ ಪ್ರಕರಣದ ವಿಚಾರಣೆ ವೇಳೆ ವಿಶಿಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಇಂತಹ ಕಾನೂನು ಹೋರಾಟಗಳು ಕಳವಳಕ್ಕೆ ಕಾರಣವಾಗಿವೆ. ಅಲ್ಲದೇ ಹಿಂದೂ ಧರ್ಮದಲ್ಲಿ ಸಂಘರ್ಷ ಮತ್ತು ಪಾಪದ ಯುಗವನ್ನು ಉಲ್ಲೇಖಿಸಿ “ಕಲಿಯುಗ ಬಂದಿದೆ ಎಂದು ತೋರುತ್ತದೆ” ಎಂದು ನ್ಯಾಯಾಲಯ ಹೇಳಿದೆ.
80 ವರ್ಷದ ನಿವೃತ್ತ ಆರೋಗ್ಯ ಮೇಲ್ವಿಚಾರಕ ಮುನೇಶ್ ಕುಮಾರ್ ಗುಪ್ತಾ ಮತ್ತು ಅವರ ಪತ್ನಿ 76 ವರ್ಷ 2018 ರಿಂದ ಆಸ್ತಿ ವಿವಾದದಲ್ಲಿ ತೊಡಗಿದ್ದರು. ಈ ವಿಷಯವು ಕೊನೆಗೆ ಪೊಲೀಸ್ ಠಾಣೆ ಮೆಟ್ಟಿಲೇರಿತು. ನಂತರ ದಂಪತಿಯನ್ನು ಕುಟುಂಬ ಸಮಾಲೋಚನೆ ಕೇಂದ್ರಕ್ಕೆ ಕಳುಹಿಸಲಾಯಿತು.
ಈ ವಿವಾದವನ್ನು ಪರಿಹರಿಸಲು ಸಾಧ್ಯವಾಗದ ಕಾರಣ, ಗುಪ್ತಾ ಮತ್ತು ಅವರ ಪತ್ನಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ಈ ಮಧ್ಯೆ ಮಹಿಳೆಯು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ತನ್ನ ಪತಿಯಿಂದ 15,000 ರೂ.ಗಳ ಜೀವನಾಂಶವನ್ನು ಕೋರಿ ಅರ್ಜಿ ಸಲ್ಲಿಸಿದರು. ಅವರ ಮಾಸಿಕ ಪಿಂಚಣಿ ಸುಮಾರು 35,000 ರೂಪಾಯಿ.
ಫೆಬ್ರವರಿ 16 ರಂದು ನೀಡಿದ ಆದೇಶದಲ್ಲಿ ನ್ಯಾಯಾಲಯವು ಗುಪ್ತಾ ಅವರಿಗೆ ಜೀವನಾಂಶವಾಗಿ 5,000 ರೂ.ಗಳನ್ನು ನೀಡುವಂತೆ ಕೇಳಿದೆ. ಆದರೆ ಅವರು ಈ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದಾರೆ.
ಮಂಗಳವಾರ ನಡೆದ ವಿಚಾರಣೆಯ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಸೌರಭ್ ಶ್ಯಾಮ್ ಶಂಶೇರಿ, “ಕಲಿಯುಗ ಬಂದಿದೆ ಎಂದು ತೋರುತ್ತದೆ. ಇಂತಹ ಕಾನೂನು ಹೋರಾಟಗಳು ಕಳವಳಕಾರಿ ವಿಷಯವಾಗಿದೆ. ಇದೇ ವೇಳೆ ಅವರು ಮಹಿಳೆಗೆ ನೋಟಿಸ್ ನೀಡಿದ್ದಾರೆ. ಮುಂದಿನ ವಿಚಾರಣೆಯ ವೇಳೆಗೆ ದಂಪತಿಗಳು ಇತ್ಯರ್ಥಕ್ಕೆ ಬರುತ್ತಾರೆ ಎಂದು ಆಶಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth