ರಮೇಶ್ ಜಾರಕಿಹೊಳಿ ಸಿಡಿಗೆ ಮಹತ್ವದ ತಿರುವು | ವಿಡಿಯೋದಲ್ಲಿರುವ ಧ್ವನಿ ಯಾರದ್ದು ಗೊತ್ತಾ?
15/03/2021
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವು ಲಭ್ಯವಾಗಿದ್ದು, ಸಿಡಿಯಲ್ಲಿ ಕೇಳಿ ಬಂದಿರುವ ಧ್ವನಿಯು ಬೇರೊಬ್ಬ ವ್ಯಕ್ತಿಯದ್ದು ಎಂದು ಹೇಳಲಾಗಿದೆ.
ವಿಡಿಯೋದಲ್ಲಿರುವ 10 ನಿಮಿಷಗಳ ಧ್ವನಿಯನ್ನು ಪೊಲೀಸರು ಎಫ್ ಎಸ್ ಎಲ್ ಗೆ ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಧ್ವನಿಯು ಚಿಕ್ಕಮಗಳೂರು ಮೂಲದ ವ್ಯಕ್ತಿಯದ್ದಾಗಿದ್ದು, ಹೀಗಾಗಿ ವ್ಯಕ್ತಿಯೋರ್ವನ ಧ್ವನಿ ಪರೀಕ್ಷೆ ನಡೆಸಲಾಗುತ್ತಿದೆ.
ಧ್ವನಿ ಪರೀಕ್ಷೆಗೊಳಗಾಗಿರು ವ್ಯಕ್ತಿಯ ಧ್ವನಿ ಹಾಗೂ ಸಿಡಿಯಲ್ಲಿರುವ ಧ್ವನಿಗೆ ಸಾಮ್ಯತೆ ಇದೆಯೇ ಎಂಬ ಬಗ್ಗೆ ಪತ್ತೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ. ವಿಧಿವಿಜ್ಞಾನ ಪ್ರಯೋಗ ವೇಳೆ ಈ ಎರಡೂ ಧ್ವನಿಗಳು ಒಂದೇ ಎಂದು ತಿಳಿದು ಬಂದರೆ ವ್ಯಕ್ತಿಯ ಬಂಧನವಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.