ದೇವಸ್ಥಾನಲ್ಲಿ ನೀರು ಕುಡಿದದ್ದಕ್ಕೆ ಮುಸ್ಲಿಮ್ ಬಾಲಕನ ಮೇಲೆ ದಾಳಿ ಮಾಡಿದ ವಿಕೃತ ಮನುವಾದಿ
ಘಾಜಿಯಾಬಾದ್: ದೇವಸ್ಥಾನಲ್ಲಿ ನೀರು ಕುಡಿದದ್ದಕ್ಕೆ ಮುಸ್ಲಿಮ್ ಯುವಕನಿಗೆ ವಿಕೃತ ಮನುವಾದಿಯೋರ್ವ ಮನಬಂದಂತೆ ಥಳಿಸಿದ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಶೃಂಗಿ ನಂದನ್ ಯಾದವ್ ಎಂಬಾತ, 14 ವರ್ಷದ ಬಾಲಕನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸುವ ವಿಡಿಯೋ ವೈರಲ್ ಆಗಿತ್ತು. ಬಾಯಾರಿಕೆ ಆಯಿತೆಂದು 14 ವರ್ಷದ ಮುಸ್ಲಿಮ್ ಬಾಲಕ ಸಮೀಪದಲ್ಲೇ ಇದ್ದ ದೇವಸ್ಥಾನದಲ್ಲಿ ನೀರು ಕುಡಿದಿದ್ದಾನೆ. ಈ ವಿಚಾರವಾಗಿ ಬಾಲಕನನ್ನು ಹಿಡಿದುಕೊಂಡ ಯಾದವ್ ನೀನು ಯಾರು? ನಿನ್ನ ಅಪ್ಪನ ಹೆಸರೇನು ಎಂದು ಕೇಳಿ ಹಲ್ಲೆ ಮಾಡಿದ್ದಾನೆ. ಕೈಯನ್ನು ತಿರುಚಿ ವಿಕೃತಿ ಮೆರೆದಿದ್ದಾನೆ.
ಶೃಂಗಿ ನಂದನ್ ಯಾದವ್ ಇಂಜಿನಿಯರಿಂಗ್ ಪದವೀಧರನಾಗಿದ್ದಾನೆ. ಈತ ಮೂಲತಃ ಬಿಹಾರದವನು ಎಂದು ತಿಳಿದು ಬಂದಿದೆ. ಈತನ ಮುಖಕ್ಕೆ ಒಂದು ಉದ್ಯೋಗವೂ ದೊರೆತಿರಲಿಲ್ಲ. ಹೀಗಾಗಿ ದೇವಸ್ಥಾನದಲ್ಲಿಯೇ ಉಂಡಾಡಿ ಗುಂಡನಂತೆ ಬೆಳೆಯುತ್ತಿದ್ದ. ಮಾಡಲು ಬೇರೆ ಕೆಲಸ ಇಲ್ಲದಿರುವ ಸಮಯದಲ್ಲಿಯೇ ಮನುವಾದವನ್ನು ತಲೆಯಲ್ಲಿ ತುಂಬಿಕೊಂಡಿದ್ದ ಈತ, ಬಾಯಾರಿಕೆಯಿಂದ ನೀರು ಕುಡಿದದ್ದಕ್ಕೆ ಹಿಂಸಿಸಿದ್ದಾನೆ.
ಯಾರದ್ದೇ ಮನೆಗೆ ಯಾರು ಬಂದರು ಕೂಡ ಮೊದಲು ಕುಡಿಯಲು ನೀರು ಕೊಡುತ್ತಾರೆ. ಆದರೆ ಕುಡಿಯುವ ನೀರನ್ನೂ ಕೊಡಲು ಈ ರೀತಿಯ ದುಷ್ಟತನ ಮೆರೆಯುವ ಮನುವಾದಿ ಮನಸ್ಥಿಗೆ ಏನನ್ನಬೇಕು ಎನ್ನುವ ಮಾತುಗಳು ಸದ್ಯ ಕೇಳಿ ಬಂದಿವೆ.