ಕ್ರೂರ: ಶಾಲೆಯ ಅಭಿವೃದ್ಧಿಗಾಗಿ ಎರಡನೇ ಕ್ಲಾಸಿನ ವಿದ್ಯಾರ್ಥಿಯ ಬಲಿ; ನರಬಲಿ ನೋಡಿ ಜನರು ಕಂಗಾಲು
ಉತ್ತರ ಪ್ರದೇಶದಿಂದ ಬೆಚ್ಚಿ ಬೀಳಿಸುವ ನರಬಲಿಯ ಘಟನೆ ನಡೆದಿದೆ. ಶಾಲೆಯ ಅಭಿವೃದ್ಧಿ ಮತ್ತು ಯಶಸ್ವಿಗಾಗಿ ಎರಡನೇ ಕ್ಲಾಸಿನಲ್ಲಿ ಕಲಿಯುತ್ತಿರುವ ಮಗುವಿನ ಕತ್ತು ಕೊಯ್ದು ಬಲಿ ನೀಡಲಾಗಿದೆ. ಹಾತರಸ್ ನಲ್ಲಿ ಸೆಪ್ಟೆಂಬರ್ 22ರಂದು ಹಾಸ್ಟೆಲ್ ಕೋಣೆಯಲ್ಲಿ ಈ ಕ್ರೌರ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ. ಶಾಲೆಯ ಡೈರೆಕ್ಟರ್ ದಿನೇಶ್ ಬಘೇಲ್, ಇವರ ತಂದೆ ಯಶೋಧನ್ ಸಿಂಗ್, ಅಧ್ಯಾಪಕರಾದ ಲಕ್ಷ್ಮಣ್ ಸಿಂಗ್, ವೀರ್ ಪಾಲ್ ಸಿಂಗ್, ರಾಮ್ ಪ್ರಕಾಶ್ ಸೋಲಂಕಿ ಮುಂತಾದವರಿಗೆ ಈ ಬಲಿಯಲ್ಲಿ ಪಾತ್ರ ಇದೆ ಹಾತರಸ್ ಎಸ್ಪಿ ನಿಪುನ್ ಅಗರ್ ವಾಲ್ ಹೇಳಿದ್ದಾರೆ.
ಡಿಎಲ್ ಪಬ್ಲಿಕ್ ಶಾಲೆಯಲ್ಲಿ ಈ ಕ್ರೌರ್ಯ ನಡೆದಿದ್ದು ಸೆಪ್ಟೆಂಬರ್ ಆರರಂದು ಮತ್ತೋರ್ವ ಶಾಲಾ ಬಾಲಕನನ್ನು ನರಬಲಿ ನೀಡಲು ಈ ಕ್ರೂರಿಗಳು ತಯಾರಿ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆದರೆ ಮಗು ಬೊಬ್ಬೆ ಹಾಕಿತು. ಬಳಿಕ ಪೊಲೀಸ್ ತನಿಖೆ ಯಲ್ಲಿ ಈ ಮಗುವಿನ ಕತ್ತನ್ನು ಹಿಸುಕಿರುವುದಾಗಿ ಗೊತ್ತಾಗಿತ್ತು.
ಸೆಪ್ಟೆಂಬರ್ 22ರಂದು ಶಾಲೆಯ ಹಿಂಬದಿಯಲ್ಲಿರುವ ಗುಂಡಿಯಲ್ಲಿ ಎರಡನೇ ತರಗತಿಯ ವಿದ್ಯಾರ್ಥಿಯ ಬಲಿ ನೀಡುವ ತಯಾರಿ ನಡೆದಿತ್ತು. ಅಲ್ಲಿಗೆ ಕೊಂಡುಹೋಗುವ ವೇಳೆ ವಿದ್ಯಾರ್ಥಿ ಎಚ್ಚರವಾಗಿ ಬೊಬ್ಬೆ ಹಾಕಿದ ಪರಿಣಾಮ ಶಾಲೆಯ ಒಳಗೆ ವಿದ್ಯಾರ್ಥಿಯ ಕತ್ತು ಹಿಸುಕಿ ಕೊಲ್ಲಲಾಗಿತ್ತು. ಪರಿಶೀಲನೆಯ ವೇಳೆ ಮಂತ್ರವಾದಕ್ಕೆ ಸಂಬಂಧಿಸಿದ ವಸ್ತುಗಳು ಸಿಕ್ಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth