ವಾಹನ ಕಳ್ಳತನ ತಡೆಯಲು ವಾಹನ ಮಾಲೀಕರು ಹೀಗೆ ಮಾಡಿ: ಪೊಲೀಸ್ ಆಯುಕ್ತರಿಂದ ಮಹತ್ವದ ಮಾಹಿತಿ - Mahanayaka
1:31 PM Thursday 12 - December 2024

ವಾಹನ ಕಳ್ಳತನ ತಡೆಯಲು ವಾಹನ ಮಾಲೀಕರು ಹೀಗೆ ಮಾಡಿ: ಪೊಲೀಸ್ ಆಯುಕ್ತರಿಂದ ಮಹತ್ವದ ಮಾಹಿತಿ

dayananda
28/09/2024

ಬೆಂಗಳೂರು: ನಗರದಲ್ಲಿ ದ್ವಿಚಕ್ರವಾಹನಗಳ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಹಿಸಲು ವಾಹನ ಮಾಲೀಕರು ಸೂಕ್ತ ಮಾರ್ಪಾಡು ಮಾಡಿಕೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ಸಲಹೆ ನೀಡಿದ್ದಾರೆ.

ದ್ವಿಚಕ್ರವಾಹನಗಳ ಕಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ಕ್ರಮವಹಿಸಲು ಸೂಕ್ತ ಮಾರ್ಪಾಡುಗಳನ್ನು ಮಾಡುವ ಬಗ್ಗೆ ವಾಹನ ಮಾರಾಟ ಮಾಡುವ ಮಾಲೀಕರು ಗ್ರಾಹಕರಿಗೆ ಆ್ಯಂಟಿ-ಥೀಫ್ ಮೆಜರ್‌ರ‍ಸಗಳನ್ನು ಅಳವಡಿಸಿಕೊಳ್ಳುವಂತೆ ಸೂಕ್ತ ತಿಳುವಳಿಕೆ ನೀಡಬೇಕೆಂದು ಸೂಚಿಸಲಾಗಿದೆ.

ವಾಹನ ಕಳ್ಳತನವನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ವಾಹನಗಳಿಗೆ ಜಿಪಿಎಸ್ ಸಿಸ್ಟಮ್, ವ್ಹೀಲ್ ಲಾಕಿಂಗ್ ಸಿಸ್ಟಮ್ ಅಳವಡಿಸುವುದು, ಗಟ್ಟಿ–ಮುಟ್ಟಾದ ಆ್ಯಂಡ್ ಲಾಕ್ ಅಳವಡಿಸುವುದು ಹಾಗೂ ನಕಲಿ ಕೀಬಳಸಿ ಅಥವಾ ಸರ್ಕ್ಯೂಟ್ ಬ್ರೇಕ್ ಮಾಡಿ ವಾಹನ ಕಳ್ಳತನಕ್ಕೆ ಪ್ರಯತ್ನಿಸಿದಲ್ಲಿ ಸೈರನ್ ಆಗುವಂತಹ ವ್ಯವಸ್ಥೆ ಅಥವಾ ಮೊಬೈಲ್ ಗೆ ಮಾಹಿತಿ ಬರುವಂತಹ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ.

ಸಿಸಿಟಿವಿ ಇರುವ ವ್ಯಾಪ್ತಿ ಪ್ರದೇಶದಲ್ಲೇ ವಾಹನ ನಿಲ್ಲಿಸುವುದು, ನಿರ್ಜನ ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ತಪ್ಪಿಸುವುದು, ವಾಹನ ನಿಲ್ಲಿಸುವಾಗ ಕೀ ಬಿಟ್ಟು ಹೋಗದಿರುವಂತೆ ಎಚ್ಚರಿಕೆ ವಹಿಸುವುದು ಸೂಕ್ತ.

ಈ ಎಲ್ಲ ಪರಿಣಾಮಕಾರಿ ಅಂಶಗಳನ್ನು ಮಾಲೀಕರು ಬಳಸುವುದರಿಂದ ವಾಹನ ಕಳ್ಳತನವನ್ನು ತಡೆಯಬಹುದಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ