ಬಿಗ್ ಬಾಸ್ ಗೆ ಎಂಟ್ರಿ ನೀಡಿದ ಹಿಂದುತ್ವ ನಾಯಕಿ ಚೈತ್ರಾ ಕುಂದಾಪುರ, ಲಾಯರ್ ಜಗದೀಶ್!
ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳ ಆಯ್ಕೆ ಬಹಳ ಕುತೂಹಲಕಾರಿಯಾಗಿ ಮುಂದುವರಿಯುತ್ತಿದೆ. ಈ ಬಾರಿ ಇಬ್ಬರು ಸ್ಪರ್ಧಿಗಳು ಬಿಗ್ ಬಾಸ್ ನಲ್ಲಿ ಗಮನ ಸೆಳೆಯಲಿದ್ದಾರೆ.
ಲಾಯರ್ ಜಗದೀಶ್:
ಇತ್ತೀಚೆಗೆ ಹಲವು ವಿವಾದಗಳಲ್ಲಿ ಹೆಸರು ಕೇಳಿ ಬರುತ್ತಿರುವ ಲಾಯರ್ ಜಗದೀಶ್ ಬಿಗ್ ಬಾಸ್ ಗೆ ಎಂಟ್ರಿ ನೀಡಿದ್ದಾರೆ. ಇತ್ತೀಚೆಗಷ್ಟೇ ಬಿಗ್ ಬಾಸ್ ಗೆ ಕರೆದರೆ ಹೋಗುತ್ತೇನೆ ಎಂದು ಮಾಧ್ಯಮಗಳಿಗೆ ಜಗದೀಶ್ ಹೇಳಿಕೆ ನೀಡಿದ್ದರು. ಕಿಚ್ಚ ಸುದೀಪ್ ಅಂದ್ರೆ ನಮ್ಮ ಕುಟುಂಬಸ್ಥರಿಗೆ ಬಹಳ ಇಷ್ಟ ಅಂತಲೂ ಹೇಳಿದ್ದರು.
ಹಿಂದುತ್ವ ನಾಯಕಿ ಚೈತ್ರಾ ಕುಂದಾಪುರ:
ಉದ್ಯಮಿಯೊಬ್ಬರಿಗೆ ಟಿಕೆಟ್ ನೀಡುವುದಾಗಿ ವಂಚಿಸಿದ ಆರೋಪದಲ್ಲಿ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಹಿಂದುತ್ವ ನಾಯಕಿ ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಗೆ ಎಂಟ್ರಿಯಾಗಿದ್ದಾರೆ.
ಅಂದ ಹಾಗೆ ಚೈತ್ರಾ ಕುಂದಾಪುರ ಹಲವು ಮಾಧ್ಯಮಗಳಲ್ಲಿ ಕೂಡ ಕೆಲಸ ಮಾಡಿದ್ದರು. ಬಿಜೆಪಿ ಪರ ಸಾಕಷ್ಟು ಕ್ಯಾಂಪೇನ್ ಗಳನ್ನು ಮಾಡಿ, ಜನಪ್ರಿಯರಾಗಿದ್ದರು. ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಎಂಬವರಿಗೆ ಮೋಸ ಮಾಡಿದ ಆರೋಪ ಕೇಳಿ ಬಂದ ನಂತರ ಅವರು ತಟಸ್ಥವಾಗಿದ್ದರು. ಇದೀಗ ಬಿಗ್ ಬಾಸ್ ಗೆ ಎಂಟ್ರಿ ನೀಡುವ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: