ಕೊವಿಡ್ ಲಸಿಕೆ ಎಂದು ನಿದ್ದೆ ಮಾತ್ರೆ ನೀಡಿದ ಯುವತಿ | ಬಳಿಕ ಆಕೆ ಮಾಡಿದ ಕೆಲಸ ಏನು ಗೊತ್ತಾ? - Mahanayaka
11:08 PM Thursday 12 - December 2024

ಕೊವಿಡ್ ಲಸಿಕೆ ಎಂದು ನಿದ್ದೆ ಮಾತ್ರೆ ನೀಡಿದ ಯುವತಿ | ಬಳಿಕ ಆಕೆ ಮಾಡಿದ ಕೆಲಸ ಏನು ಗೊತ್ತಾ?

15/03/2021

ಚೆನ್ನೈ: ಕೊರೊನಾ ಲಸಿಕೆ ನೀಡುತ್ತೇನೆ ಎಂದು ಯುವತಿಯೊಬ್ಬಳು ತನ್ನ ಚಿಕ್ಕಮ್ಮ ಹಾಗೂ ಆಕೆಯ ಕುಟುಂಬಕ್ಕೆ ನಿದ್ದೆ ಮಾತ್ರೆ ನೀಡಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಪೆರಂಬಲೂರು ಜಿಲ್ಲೆಯ ಕುನ್ನಂ ತಾಲೂಕಿನ ಕೀಚ್ಕುಡಿಕಾಡು ಗ್ರಾಮದ ನಿವಾಸಿ ಸತ್ಯಪ್ರಿಯ ಈ ಕೃತ್ಯ ಎಸಗಿದವಳಾಗಿದ್ದಾಳೆ.  ಈಕೆ ಆನ್ ಲೈನ್ ಮಾರ್ಕೆಟಿಂಗ್ ಏಜೆನ್ಸಿವೊಂದರಲ್ಲಿ ಕೂಡ ಕಾರ್ಯ ನಿರ್ವಹಿಸುತ್ತಿದ್ದಳು.

ಸತ್ಯಪ್ರಿಯ ಗುರುವಾರ ತನ್ನ ಚಿಕ್ಕಮ್ಮನ ಕೆ.ರಾಸಾತಿ ಮನೆಯೆ ತೆರಳಿದ್ದು, ಈ ವೇಳೆ ತಾನು ನಿಮಗೆ ಕೊವಿಡ್ ಲಸಿಕೆ ನೀಡುತ್ತೇನೆ ಎಂದು ಹೇಳಿದ್ದಾಳೆ. ಆಕೆಯ ಮಾತನ್ನು ನಂಬಿ ಕುಟುಂಬಸ್ಥರು ಅನುಮತಿ ನೀಡಿದ್ದರು.

ಕೊವಿಡ್ ಲಸಿಕೆ ಪಡೆದ ಬಳಿಕ ಈ ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಪ್ರಜ್ಞೆ ತಪ್ಪಿ ಬಿದ್ದಿದ್ದು,  ಎಲ್ಲರಿಗೂ ಗಡದ್ದಾಗಿ ನಿದ್ದೆ ಆವರಿಸಿದೆ. ಮರುದಿನ ಬೆಳಗ್ಗೆ ಮನೆಯವರು ಎಲ್ಲರೂ ಎಚ್ಚರಗೊಂಡಿದ್ದು, ಎಚ್ಚರಗೊಂಡಾಗ ಮಾಂಗಲ್ಯ ಸರ, ಮೊದಲಾದ ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯ ಯುವತಿಯನ್ನು ಪೊಲೀಸರು ಬಂಧಿಸಿದ್ದು, ತಾನು ನಿದ್ರೆ ಮಾತ್ರೆ ನೀಡಿ  ಚಿನ್ನಾಭರಣ ದೋಚಿ ಪರಾರಿಯಾಗಿರುವುದಾಗಿ ಆಕೆ ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾಳೆ. ಆರೋಪಿ ಯುವತಿಯ ವಿರುದ್ದ ಪೊಲೀಸರು ವಿವಿಧ ಸೆಕ್ಷನ್ ಗಳಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ