ಶಾಲಾ ಕಟ್ಟಡದಲ್ಲಿ ನಮಾಜ್ ಮಾಡಿದ ಆರೋಪ: ಪ್ರಾಥಮಿಕ ಶಾಲೆಯ ಶಿಕ್ಷಕಿಯ ಸಸ್ಪೆಂಡ್
ಶಾಲಾ ಅವಧಿಯಲ್ಲಿ ಶಾಲಾ ಕಟ್ಟಡದಲ್ಲಿ ನಮಾಜ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಪ್ರಾಥಮಿಕ ಶಾಲೆಯ ಶಿಕ್ಷಕಿ ಅಸ್ಮಾ ಪರ್ವೀನ್ ಅವರನ್ನು ಸಸ್ಪೆಂಡ್ ಮಾಡಲಾದ ಘಟನೆ ರಾಜಸ್ಥಾನದ ಬೇವಾರ್ ನಲ್ಲಿ ನಡೆದಿದೆ.
ಈ ಅಸ್ಮಾ ಪರ್ವೀನ್ ಮತ್ತು ಇನ್ನೊರ್ವ ಟೀಚರ್ ಶಗುಪ್ತ ಅವರು ಜೊತೆಯಾಗಿ ನಮಾಜ್ ಮಾಡಿದ್ದಾರೆ ಮತ್ತು ಮಕ್ಕಳಲ್ಲಿ ನಮಾಜ್ ಮಾಡುವಂತೆ ಪ್ರೇರಣೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಈ ಸಸ್ಪೆಂಡ್ ನಡೆದಿದೆ.
ಸ್ಥಳೀಯರು ಶಾಲಾ ಆಡಳಿತ ಮತ್ತು ಡಿಸ್ಟ್ರಿಕ್ಟ್ ಎಜುಕೇಶನ್ ಆಫೀಸರ್ ಗೆ ದೂರು ನೀಡಿದ ಬಳಿಕ ಈ ಘಟನೆ ನಡೆದಿದೆ. ದೂರಿನ ಆಧಾರದಲ್ಲಿ ಶಿಕ್ಷಣಾಧಿಕಾರಿ ತನಿಖೆಗೆ ಆದೇಶಿಸಿದ ಬಳಿಕ ಅಸ್ಮ ಪರ್ವೀನ್ ಅವರನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿದೆ. ಆದರೆ ಶಗುಪ್ತ ಅವರನ್ನು ಈವರೆಗೆ ಕೆಲಸದಿಂದ ವಜಾ ಮಾಡಲಾಗಿಲ್ಲ. ಅವರ ಬಗ್ಗೆ ತನಿಖಾ ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿದುಬಂದಿದೆ.
ಆದರೆ ಮೂರು ವರ್ಷಗಳ ಹಿಂದಿನ ಘಟನೆಗೆ ಈಗ ಮಹತ್ವ ಕೊಟ್ಟು ವಿಚಾರಣೆ ನಡೆಸಿ ಶಿಕ್ಷಕರನ್ನು ಸಸ್ಪೆಂಡ್ ಮಾಡಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪರ್ವೀನ್ ಅವರನ್ನು ವಜಾ ಮಾಡಿರುವುದಕ್ಕೆ ಪೂರಕವಾಗಿ ಯಾವುದೇ ಮಾಹಿತಿಯನ್ನು ಅಥವಾ ಕಾರಣಗಳನ್ನು ಶಾಲೆ ನೀಡದೇ ಇರುವ ಬಗ್ಗೆ ಕೂಡ ಪ್ರಶ್ನೆಗಳು ಎದ್ದಿವೆ. ಒಟ್ಟು ವಿಚಾರಣಾ ಪ್ರಕ್ರಿಯೆಯ ಪ್ರಾಮಾಣಿಕತೆಯ ಬಗ್ಗೆ ಅನುಮಾನಗಳು ಉಂಟಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth