ದುರಂತ: ಕೆಲಸದ ಒತ್ತಡ, ಸಂಬಳ ಕಡಿತದ ಬೆದರಿಕೆ: ಬಜಾಜ್ ಫೈನಾನ್ಸ್ ಸಿಬ್ಬಂದಿ ಆತ್ಮಹತ್ಯೆ
ಬಜಾಜ್ ಫೈನಾನ್ಸ್ ನಲ್ಲಿ ಏರಿಯಾ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ 42 ವರ್ಷದ ವ್ಯಕ್ತಿಯೊಬ್ಬರು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಕಳೆದ ಎರಡು ತಿಂಗಳಿನಿಂದ ಕೆಲಸದಲ್ಲಿರುವ ತನ್ನ ಹಿರಿಯರು ತನ್ನ ಗುರಿಗಳನ್ನು ಪೂರೈಸುವಂತೆ ಒತ್ತಡ ಹೇರುತ್ತಿದ್ದಾರೆ ಮತ್ತು ವೇತನ ಕಡಿತದ ಬೆದರಿಕೆ ಹಾಕುತ್ತಿದ್ದಾರೆ ಎಂದು ತರುಣ್ ಸಕ್ಸೇನಾ ಡೆತ್ ನೋಟಲ್ಲಿ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ಮನೆಕೆಲಸದಾಳು ಅವರ ಮನೆಗೆ ಬಂದಾಗ ತರುಣ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರು ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳನ್ನು ಮತ್ತೊಂದು ಕೋಣೆಯಲ್ಲಿ ಲಾಕ್ ಮಾಡಿದ್ದರು.
ತರುಣ್ ಶವವನ್ನು ನೋಡಿದ ಮನೆಕೆಲಸದಾಳು ಹತ್ತಿರದಲ್ಲೇ ವಾಸಿಸುವ ತರುಣ್ ಸಹೋದರನಿಗೆ ಮಾಹಿತಿ ನೀಡಿದ್ದಾಳೆ. ಅವನು ಧಾವಿಸಿ ಬಾಗಿಲು ತೆರೆದು, ತರುಣ್ ನ ಹೆಂಡತಿ ಮತ್ತು ಮಕ್ಕಳನ್ನು ಹೊರಗೆ ಕರೆದೊಯ್ದಿದ್ದಾನೆ.
ಮಾಹಿತಿ ಪಡೆದ ಪೊಲೀಸರು ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಔಪಚಾರಿಕ ದೂರು ಸಲ್ಲಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಮೃತರು ನಿವೃತ್ತ ಗುಮಾಸ್ತರಾಗಿರುವ ತಂದೆ, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth