ಕುಸಿದ ಮೋದಿ ‌ಹವಾ: ರಾಜ್ಯ ಚುನಾವಣೆ ಮೇಲೆ ನಿಂತಿದೆ ನಮೋ ಭವಿಷ್ಯ ಎಂದ ಚುನಾವಣಾ ತಂತ್ರಜ್ಞ - Mahanayaka
1:24 AM Wednesday 11 - December 2024

ಕುಸಿದ ಮೋದಿ ‌ಹವಾ: ರಾಜ್ಯ ಚುನಾವಣೆ ಮೇಲೆ ನಿಂತಿದೆ ನಮೋ ಭವಿಷ್ಯ ಎಂದ ಚುನಾವಣಾ ತಂತ್ರಜ್ಞ

01/10/2024

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ಜನಪ್ರೀತಿ ತೀವ್ರವಾಗಿ ಕುಸಿದಿದೆ. ಈ ಸರ್ಕಾರ ಐದು ವರ್ಷ ಬಾಳಿಕೆ ಬರುತ್ತೋ ಇಲ್ಲವೋ ಎಂಬುದು ಮುಂದಿನ ವಿಧಾನಸಭಾ ಚುನಾವಣೆಗಳ ಫಲಿತಾಂಶವನ್ನು ಅವಲಂಬಿಸಿದೆ ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ. ಶೀಘ್ರ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಎನ್ಡಿಎ ಅಧಿಕಾರದಲ್ಲಿ ಮುಂದುವರೆಯಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮುಂದೆ 9 ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ, ಮೋದಿ ಸರಕಾರದ ಅಸ್ತಿತ್ವವು ಈ ಚುನಾವಣಾ ಫಲಿತಾಂಶವನ್ನು ಅವಲಂಬಿಸಿದೆ. ಜಮ್ಮು-ಕಾಶ್ಮೀರ ದೆಹಲಿ ಹರಿಯಾಣ ಮಹಾರಾಷ್ಟ್ರ ಜಾರ್ಖಂಡ್ ಬಿಹಾರ ಮುಂತಾದ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಇದರ ಫಲಿತಾಂಶ ಬಿಜೆಪಿಗೆ ವಿರುದ್ಧವಾದರೆ ಸರ್ಕಾರದ ಅಸ್ತಿತ್ವಕ್ಕೆ ಭಂಗ ಬರಲಿದೆ ಎಂದು ಹೇಳಿರುವ ಅವರು ಬಿಹಾರದಲ್ಲಿ ಮರಳಿ ಅಧಿಕಾರ ಗಳಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ ಎಂದು ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ