ಡಾ.ಅಂಬೇಡ್ಕರರ ಬುದ್ಧ ಪಯಣ | ರಘೋತ್ತಮ ಹೊ.ಬ
1907 ರಲ್ಲಿ
ಡಾ.ಅಂಬೇಡ್ಕರರು
ಮೆಟ್ರಿಕ್ಯುಲೇಷನ್
ಪಾಸು ಮಾಡಿದ್ದಕ್ಕೆ
ಸನ್ಮಾನವಾಗಿ
ಬುದ್ಧನ ಕೃತಿ
ಪಡೆದರು
ಬುದ್ಧನತ್ತ ನಡೆದರು
1917 ರಲ್ಲಿ
ಭಾರತದಲ್ಲಿ ಜಾತಿಗಳು
ಅವುಗಳ ಉಗಮ ವಿಕಾಶ
ವಿನಾಶ
ವಿದೇಶದಲ್ಲಿ ಸಂಶೋಧನೆ
ಮಂಡಿಸಿದರು
ಬುದ್ಧನತ್ತ ನಡೆದರು
1935 ರಲ್ಲಿ
ಯೆಯೋಲ
ಸಮ್ಮೇಳನದಲ್ಲಿ
ಹಿಂದೂವಾಗಿ ಹುಟ್ಟಿದ್ದೇನೆ
ಹಿಂದೂವಾಗಿ ಸಾಯಲಾರೆ
ಎಂದು ಗುಡುಗಿದರು
ಬುದ್ಧನತ್ತ ನಡೆದರು
1936 ರಲ್ಲಿ
ವಿಮೋಚನೆಯ
ಮಾರ್ಗ ಯಾವುದು?
ಎಂಬ ಸುಪ್ರಸಿದ್ಧ ಭಾಷಣ
ಮಾಡಿದರು
ಬುದ್ಧನತ್ತ ನಡೆದರು
1945 ರಲ್ಲಿ
ಅಸ್ಪೃಶ್ಯರು ಯಾರು?
ಎಂಬ ಕೃತಿ ಬರೆದರು
ಅಸ್ಪೃಶ್ಯರು ಮೂಲ ಬೌದ್ಧರು
ಎಂಬ
ಸತ್ಯ ಕಂಡುಕೊಂಡರು
ಬುದ್ಧನತ್ತ ನಡೆದರು
1950 ರಲ್ಲಿ
ಭಾರತದ ಸಂವಿಧಾನ ಬರೆದರು
ಧಮ್ಮ ಚಕ್ರ
ರಾಷ್ಟ್ರಧ್ವಜದಲ್ಲಿ ಸೇರಿಸಿದರು
ಅಶೋಕ ಸ್ತಂಭ
ರಾಷ್ಟ್ರ ಲಾಂಛನವಾಗಿಸಿದರು
ಬುದ್ಧನತ್ತ ನಡೆದರು
1956 ರಲ್ಲಿ
ಹತ್ತು ಲಕ್ಷ ಜನರ ನಡುವೆ
ಬುದ್ಧಂ ಶರಣಂ ಗಚ್ಛಾಮಿ
ಮೊಳಗಿಸಿದರು
ತಿಸರಣ, ಪಂಚಶೀಲ
22 ಪ್ರತಿಜ್ಞೆಗಳ
ಪಠಿಸಿದರು
ಅಧಿಕೃತವಾಗಿ
ಬುದ್ಧನತ್ತ ನಡೆದರು
1956 ರಲ್ಲಿ
ಪರಿನಿಬ್ಬಾಣ ಹೊಂದಿದರು
ಅವರ ಕಳೇಬರದ
ಮುಂದೆಯೇ 5 ಲಕ್ಷ ಜನ
ಬೌದ್ಧ ಧಮ್ಮ ಸ್ವೀಕರಿಸಿದರು
ಬೌದ್ಧ ವಿಧಿವಿಧಾನದ ಅನುಸಾರ
ಅಂತ್ಯ ಸಂಸ್ಕಾರ
ನೆರವೇರಿಸಿಕೊಂಡರು
ಬಾಬಾಸಾಹೇಬರು
ಅಸ್ಪೃಶ್ಯನಾಗಿ ಸಾಯದೆ
ಬೌದ್ಧರಾಗಿ
ಬುದ್ಧರ ಮಡಿಲು ಸೇರಿದರು
ಜೀವನ ಪೂರದ
ಬುದ್ಧ ಪಯಣ
ಮುಗಿಸಿದರು…
- ರಘೋತ್ತಮ ಹೊ.ಬ