ಚೈತ್ರಾನಾ ಕಂಟ್ರೋಲ್ ಮಾಡೋಕೆ ಚಿನ್ನ, ರನ್ನ ಅಂದ್ರೆ ಸಾಕಂತೆ! - Mahanayaka
11:17 PM Friday 13 - December 2024

ಚೈತ್ರಾನಾ ಕಂಟ್ರೋಲ್ ಮಾಡೋಕೆ ಚಿನ್ನ, ರನ್ನ ಅಂದ್ರೆ ಸಾಕಂತೆ!

chaithra kundapura
02/10/2024

ಬಿಗ್ ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮದಲ್ಲಿ ಗೋಲ್ಡ್ ಸುರೇಶ್ ಮತ್ತು ಮಾನಸಾ ಚೈತ್ರಾ ಬಗ್ಗೆ ಭಾರೀ ಚರ್ಚೆ ನಡೆಸಿದ್ದಾರೆ. ಚೈತ್ರಾ ಕುಂದಾಪುರ ಧ್ಯಾನ ಮಾಡುತ್ತಿರುವಾಗ ನಿದ್ದೆ ಮಾಡ್ತಿರೋದಾ ಅಂತ ಪ್ರಶ್ನಿಸಿದ್ದ ಮಾನಸ, ಚೈತ್ರಾ ಬಾಯಿಂದ ಕೇಳಬಾರದೆಲ್ಲ ಕೇಳಿ ಬಿಟ್ಟಿದ್ದಾರೆ. ಇದೀಗ ಚೈತ್ರಾ ಬಗ್ಗೆ ಮಾನಸ ಮತ್ತು ಗೋಲ್ಡ್ ಸುರೇಶ್ ಮಾತನಾಡಿರುವ ಮಾತುಗಳಿಗೆ ನೆಟ್ಟಿಗರು ನಕ್ಕಿದ್ದಾರೆ.

ಚೈತ್ರಾ ಬಗ್ಗೆ ಮಾನಸ ಹಾಗೂ ಗೋಲ್ಡ್ ಸುರೇಶ್ ಜೊತೆಗೆ ಮಾತನಾಡುತ್ತಿರುವಾಗ, ಗೋಲ್ಡ್ ಸುರೇಶ್, ತನಗೆ ಚೈತ್ರಾ ಬಗ್ಗೆ ಎಲ್ಲ ಗೊತ್ತು ಎನ್ನುವಂತೆ ಮಾತನಾಡುತ್ತಾರೆ.

ಚೈತ್ರಾನ ನಿಜಕ್ಕೂ ಕಂಟ್ರೋಲ್​ ಮಾಡೋಕೆ ಆಗಲ್ಲ. ಅವರ ಟ್ಯಾಲೆಂಟ್​ ಅರ್ಥ ಮಾಡಿಕೊಳ್ಳಿ. ಚೈತ್ರಾನ ಮೇಲಕ್ಕೆ ಹತ್ತಿಸಬೇಕು. ಮಾತಲ್ಲೇ ಮನೆ ಕಟ್ಟಿದರೆ ಹೌದೋ ಓಹ್ ಅಂತಾರೆ. ನೀನು ರನ್ನ, ಚಿನ್ನ, ಚಂದ್ರ, ಚಂದಮಾಮ ಎಂದರೆ ಮುಗಿಯಿತು. ನಮ್ಮ ಕಡೆ ಚೈತ್ರಾ, ಆ ಕಡೆ ಜಗದೀಶ್ ಅಂತ ಗೋಲ್ಡ್ ಸುರೇಶ್ ಹೇಳಿದ್ದಾರೆ.

ಮನೆ ಮಂದಿಗೆ ಚೈತ್ರಾ ಕುಂದಾಪುರ ಸ್ಟ್ರಾಂಗ್ ಸ್ಪರ್ಧಿ ಅಂತ ಅನ್ನಿಸಿ ಬಿಟ್ಟಿದೆ. ಒಂದು ಕಡೆ ಜಗದೀಶ್, ಇನ್ನೊಂದು ಕಡೆ ಚೈತ್ರಾ ಮನೆ ಮಂದಿಗೆ ತಲೆನೋವಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ