ವೇಷ ಬದಲಿಸಿ ಕಾರ್ಯಾಚರಣೆ: ನನಗೆ ಸಹಾಯ ಮಾಡಿ ಎಂದ ಅಸಿಸ್ಟೆಂಟ್ ಪೊಲೀಸ್ ಕಮಿಷನರ್
ತನಗೆ ಆಗ್ರಾದ ರೈಲ್ವೆ ಸ್ಟೇಷನ್ ಗೆ ಹೋಗಬೇಕಾಗಿದೆ. ತಾನು ಆಗ್ರಾದ ಪ್ರಮುಖ ರಸ್ತೆಯಲ್ಲಿ ಒಂಟಿಯಾಗಿ ನಿಂತಿದ್ದೇನೆ. ತನಗೆ ರೈಲ್ವೆ ಸ್ಟೇಷನ್ ಗೆ ಹೋಗಲು ಭಯವಾಗುತ್ತಿದೆ. ತನಗೆ ನೆರವಾಗುವಿರಾ ಎಂದು ಓರ್ವ ಹೆಣ್ಮಗಳು ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡುತ್ತಾಳೆ. 10 ನಿಮಿಷದಲ್ಲಿ ನಾವಲ್ಲಿಗೆ ತಲುಪುತ್ತೇವೆ ಎಂಬ ಉತ್ತರ ಪೊಲೀಸ್ ಕಂಟ್ರೋಲ್ ರೂಮಿನಿಂದ ಬರುತ್ತದೆ. ಹೇಳಿದಂತೆಯೇ ತಕ್ಷಣ ಪೊಲೀಸರು ಆ ಆಗ್ರಾ ರಸ್ತೆಗೆ ತಲುಪುತ್ತಾರೆ. ಆದರೆ ಆ ಹೆಣ್ಣು ಮಗಳನ್ನು ನೋಡಿ ಅವರು ಬೆಚ್ಚಿ ಬೀಳುತ್ತಾರೆ. ಆ ಹೆಣ್ಣು ಮಗಳು ಬೇರೆ ಯಾರೂ ಅಲ್ಲ, ಆಗ್ರ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಆಗಿದ್ದ ಸುಕನ್ಯಾ ಶರ್ಮ.
ರಾತ್ರಿಯಲ್ಲಿ ಮಹಿಳೆಯರು ಎಷ್ಟು ಸುರಕ್ಷಿತರು ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ಎಸಿಪಿ ಸುಕನ್ಯಾ ಶರ್ಮ ಅವರು ವೇಷ ಬದಲಿಸಿ ಪರೀಕ್ಷೆಗೆ ಇಳಿದಿದ್ದರು. ಅರ್ಧ ರಾತ್ರಿಯಲ್ಲಿ ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಮಾಡಿ ಸಹಾಯ ಯಾಚಿಸಿದರೆ ನೆರವು ಸಿಗುತ್ತೋ ಇಲ್ಲವೋ ಅನ್ನೋದನ್ನ ಕೂಡ ಅವರಿಗೆ ಪರೀಕ್ಷಿಸಬೇಕಾಗಿತ್ತು.
ಪೊಲೀಸ್ ಕಂಟ್ರೋಲ್ ರೂಂ ಗೆ ತನ್ನ ವಿಷಯವನ್ನು ಹೇಳಿದ ಬಳಿಕ ಅವರಿಗೆ ಮಹಿಳಾ ಪೆಟ್ರೋಲಿಂಗ್ ತಂಡದಿಂದ ಕರೆ ಬಂತು ಹೆದರಬೇಡಿ ನಾವು ಬರುತ್ತಿದ್ದೇವೆ ಎಂಬ ಸೂಚನೆಯನ್ನು ಅವರು ನೀಡಿದರು. ಸ್ಥಳಕ್ಕೆ ತಲುಪಿದ ಪೊಲೀಸರು ಎಸಿಪಿಯನ್ನು ಕಂಡು ದಂಗಾದರು. ಮಾತ್ರ ಅಲ್ಲ ಪೊಲೀಸರನ್ನು ಎಸಿಪಿ ಅಭಿನಂದಿಸಿದರು.
ಈ ನಡುವೆ ಆಟೋ ರಿಕ್ಷಾದಲ್ಲಿ ಕುಳಿತ ಎಸಿಪಿ ಅವರು ತಾನು ಹೇಳಿದ ಸ್ಥಳಕ್ಕೆ ತಲುಪಿಸುವಂತೆ ಹೇಳಿದರು. ಚಾಲಕ ಯುನಿಫಾರ್ಮ್ ಧರಿಸಿರಲಿಲ್ಲ. ಬಳಿಕ ತಾನು ಎಸಿಪಿಯಾಗಿದ್ದೇನೆ ಮತ್ತು ಯುನಿಫಾರ್ಮ್ ಧರಿಸುವಂತೆ ಅವರು ಹೇಳಿದರು.
ಸುಕನ್ಯಾ ಅವರ ಈ ಪರೀಕ್ಷಾ ಕಾರ್ಯಕ್ರಮ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಶ್ಲಾಘನೆಗೆ ಒಳಗಾಗಿದೆ. ಎಲ್ಲಾ ನಗರಗಳಲ್ಲಿಯೂ ಪೊಲೀಸರು ಈ ಬಗೆಯ ಪರೀಕ್ಷಾ ಕಾರ್ಯ ನಡೆಸಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಜನರು ಒತ್ತಾಯಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth