ಕಪಿಲ್ ಶರ್ಮಾ ಸುಸಂಸ್ಕೃತನಲ್ಲ: ನಟ ಮುಖೇಶ್ ಖನ್ನ ಆಕ್ಷೇಪ
ಹಿಂದಿ ಟಿವಿ ವೀಕ್ಷಕರಿಗೆ ಕಪಿಲ್ ಶರ್ಮಾ ಸುಪರಿಚಿತ ಹೆಸರು. ಸಿನಿಮಾ ತಾರೆಯರು, ಸೆಲೆಬ್ರಿಟಿಗಳನ್ನು ಸೇರಿಸಿ ಅವರು ಮಾಡುವ ದಿ ಕಪಿಲ್ ಶರ್ಮ ಶರ್ಮ ಶೋ ಬಹಳ ಜನಪ್ರಿಯ. ಆದರೆ ಇದೇ ಕಪಿಲ್ ಶರ್ಮಾ ಅವರನ್ನು ನಟ ಮುಖೇಶ್ ಖನ್ನ ತೀವ್ರವಾಗಿ ಆಕ್ಷೇಪಿಸಿದ್ದಾರೆ.
ಕಪಿಲ್ ಶರ್ಮಾ ಸುಸಂಸ್ಕೃತನಲ್ಲ. ಆತನದ್ದು ಅಶ್ಲೀಲ ಕಾರ್ಯಕ್ರಮ ಎಂದು ಮುಖೇಶ್ ಖನ್ನ ಕಿಡಿಕಾರಿದ್ದಾರೆ. ಬಾಲಿವುಡ್ ಮಾಗಜಿನ್ ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಹಾಭಾರತ ಸೀರಿಯಲ್ ನಲ್ಲಿ ಭೀಷ್ಮನಾಗಿ ಅಭಿನಯಿಸಿ ಅವರು ಖ್ಯಾತರಾಗಿದ್ದಾರೆ. ಶಕ್ತಿಮಾನ್ ಧಾರಾವಾಹಿಯಲ್ಲಿ ಮುಖೇಶ್ ಖನ್ನ ಅವರ ಪಾತ್ರ ಬಹಳ ಗಮನಾರ್ಹ.
ಕಪಿಲ್ ಶರ್ಮ ತನ್ನ ಶೋನಲ್ಲಿ ಶಕ್ತಿಮಾನ್ ವೇಷ ಧರಿಸಿದ ಹಿನ್ನೆಲೆಯಲ್ಲಿ ಮುಕೇಶ್ ಖನ್ನಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth