ನಿಮ್ಮ ಪ್ರೋಗ್ರಾಂ ಹಾಳು ಮಾಡಿಲ್ಲ ಅಂದ್ರೆ… | ಬಿಗ್ ಬಾಸ್ ಗೆ ಲಾಯರ್ ಜಗದೀಶ್ ಅವಾಜ್
ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿರುವ ಲಾಯರ್ ಜಗದೀಶ್ ಬಿಗ್ ಬಾಸ್ ಶೋ ವಿರುದ್ಧವೇ ತಿರುಗಿ ಬಿದ್ದಿದ್ದು, ಬಿಗ್ ಬಾಸ್ ಮನೆಯೊಳಗೆ ಕ್ಯಾಮರಾ ನೋಡಿ ಬಿಗ್ ಬಾಸ್ ಗೆ ಅವಾಜ್ ಹಾಕಿದ್ದಾರೆ.
ಕ್ಯಾಮರಾಕ್ಕೆ ಕೈ ತೋರಿಸಿ ಮಾತನಾಡಿದ ಲಾಯರ್ ಜಗದೀಶ್, ನಾನು ಆಚೆ ಹೋಗಲಿ.. ಈ ‘ಬಿಗ್ ಬಾಸ್’ನ ನಾನು ಮ್ಯಾನಿಪ್ಯುಲೇಟ್ ಮಾಡಲಿಲ್ಲ ಅಂದ್ರೆ ನನ್ನ ಹೆಸರು ಜಗದೀಶ್ ಅಲ್ಲ. ನಾನು ‘ಬಿಗ್ ಬಾಸ್’ನ ಎಕ್ಸ್‌ಪೋಸ್ ಮಾಡ್ತೀನಿ. ನಿಮ್ಮ ಪ್ರೋಗ್ರಾಂ ಹಾಳು ಮಾಡಿಲ್ಲ ಅಂದ್ರೆ ನನ್ನ ಹೆಸರು ಬೇರೆ ಇಡು ಎಂದು ಧಮ್ಕಿ ಹಾಕಿದ್ದಾರೆ.
ಬಿಗ್ ಬಾಸ್ ಗೆ ಲಾಯರ್ ಜಗದೀಶ್ ಬ್ಲ್ಯಾಕ್ ಮೇಲ್ ಮಾಡಿರುವ ವಿಡಿಯೋ ಇಂದು ಪ್ರಸಾರವಾಗಲಿದೆ. ಪ್ರೋಮೋ ತುಣುಕನ್ನು ಮಾತ್ರವೇ ಈಗಾಗಲೇ ಹಂಚಿಕೊಳ್ಳಲಾಗಿದೆ.
ಇನ್ನೂ ಲಾಯರ್ ಜಗದೀಶ್ ಅವರ ಈ ಮಾತುಗಳಿಗೆ ಕಿಚ್ಚ ಸುದೀಪ್ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಿದೆ. ಕಿಚ್ಚ ಸುದೀಪ್ ಅವರ ಪ್ರತಿಕ್ರಿಯೆ ಹೀಗಿರುತ್ತೆ ಎನ್ನುವುದನ್ನು ನೋಡಲು ಬಿಗ್ ಬಾಸ್ ಕಾರ್ಯಕ್ರಮ ವೀಕ್ಷಕರು ಕಾಯುತ್ತಿದ್ದಾರೆ.
ಟಾಸ್ಕ್ ವೇಳೆ ಧನರಾಜ್ ಆಚಾರ್ ಜೊತೆ ಲಾಯರ್ ಜಗದೀಶ್ ಕಿರಿಕ್ ಮಾಡಿಕೊಂಡರು. ಯಮುನಾ ಶ್ರೀನಿಧಿ, ಉಗ್ರಂ ಮಂಜು, ಭವ್ಯಾ ಗೌಡ, ಶಿಶಿರ್ ಶಾಸ್ತ್ರಿ, ತ್ರಿವಿಕ್ರಮ್ ಜೊತೆ ಲಾಯರ್ ಜಗದೀಶ್ ವಾಕ್ಸಮರ ನಡೆಸಿದರು. ‘ಕಾಮಿಡಿ ಪೀಸ್’ ಎಂದಿದ್ದಕ್ಕೆ ಮಾನಸಾ ಹಾಗೂ ಲಾಯರ್ ಜಗದೀಶ್ ಮಧ್ಯೆ ಏಕವಚನದಲ್ಲಿ ಜಗಳ ಆಯ್ತು. ಇಷ್ಟೆಲ್ಲಾ ಆದ್ಮೇಲೆ.. ‘ಬಿಗ್ ಬಾಸ್’ ವಿರುದ್ಧವೇ ಲಾಯರ್ ಜಗದೀಶ್ ತಿರುಗಿಬಿದ್ದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: