ನಾನು ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ಆದ್ರೆ: ಕಾಂಗ್ರೆಸ್ ಸಚಿವರಿಗೆ ಆರ್.ಅಶೋಕ್ ಸವಾಲು ಏನು? - Mahanayaka
2:05 AM Wednesday 11 - December 2024

ನಾನು ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ಆದ್ರೆ: ಕಾಂಗ್ರೆಸ್ ಸಚಿವರಿಗೆ ಆರ್.ಅಶೋಕ್ ಸವಾಲು ಏನು?

r ashok
03/10/2024

ಬೆಂಗಳೂರು: ನಾನು ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ನೈತಿಕತೆ ಇದ್ರೆ ಸಿಎಂ ಸಿದ್ದರಾಮಯ್ಯ ಅವರಿಂದ 4 ಸಚಿವರು ರಾಜೀನಾಮೆ ಪಡೆಯಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದಾರೆ.

ಅಶೋಕ್ ವಿರುದ್ಧ ಭೂ ಅಕ್ರಮದ ಬಗ್ಗೆ ಪ್ರಸ್ತಾಪ ಮಾಡಿದ್ದ 4 ಜನ ಸಚಿವರಿಗೆ ತಿರುಗೇಟು ಕೊಟ್ಟ ಅಶೋಕ್, 4 ಸಚಿವರು ಹೇಳಿದಂತೆ ಅವರಿಗೆ ಗೌರವ ಕೊಟ್ಟು ನಾನು ವಿಪಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ. ಅದೇ ನೈತಿಕತೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆಯನ್ನ 4 ಜನ ಮಂತ್ರಿಗಳು ಪಡೆಯಲಿ. ಅಥವಾ ಪರಮೇಶ್ವರ್ ಬಿಟ್ಟು ಉಳಿದ 3 ಜನ ಸಚಿವರು ರಾಜೀನಾಮೆ ಕೊಟ್ಟು ಸಿದ್ದರಾಮಯ್ಯ ಮೇಲಿನ ಪ್ರೀತಿ ಅನಾವರಣ ಮಾಡಲಿ ಎಂದು ಸವಾಲು ಹಾಕಿದರು.

ಸಚಿವರಿಗೆ ನಾನು ಕೊಟ್ಟಿರೋ ಸವಾಲನ್ನ 24 ಗಂಟೆ ಒಳಗೆ ಸ್ವೀಕಾರ ಮಾಡಲಿ ಅಂತ ಸವಾಲ್ ಹಾಕಿದ್ರು. ಲೊಟ್ಟೆಗೊಲ್ಲಹಳ್ಳಿ ಭೂಮಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯ ಮತ್ತು ಹೈಕೋರ್ಟ್‌ನಲ್ಲಿ ನನ್ನ ಪರ ತೀರ್ಪು ಕೊಟ್ಟಿದೆ. ಸಿದ್ದರಾಮಯ್ಯ ರೀತಿ ತನಿಖೆಗೆ ಆದೇಶ ಮಾಡಿಲ್ಲ. ಹೀಗಿದ್ರೂ ದ್ವೇಷದ ರಾಜಕೀಯಕ್ಕಾಗಿ ನನ್ನ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದಿದ್ದಾರೆ.

ಅದು ಬಿಡಿಎ ಜಾಗ ಅಲ್ಲ. ಬಿಡಿಎ ಈ ಸಂಬಂಧ ನನಗೆ NOC ಕೊಟ್ಟಿದೆ. ಮಾಲೀಕರ ರಾಮಸ್ವಾಮಿಗೆ ಅವರ ತಂದೆಯಿಂದ ಜಮೀನು ಬಂದಿದೆ. ನಿಯಮದ ಪ್ರಕಾರವೇ ನಾನು ಹಣ ಬಿಟ್ಟು ರಿಜಿಸ್ಟರ್ ಮಾಡಿಕೊಂಡಿದ್ದೇನೆ. ಇದರಲ್ಲಿ ಯಾವುದೇ ಅಕ್ರಮ ಆಗಿಲ್ಲ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ