ಸಾರ್ವಕರ್ ಮಾಂಸಾಹಾರಿ ಹೇಳಿಕೆ: ದಿನೇಶ್ ಗುಂಡೂರಾವ್ ಗೆ ಬಲಪಂಥೀಯ ಸಂಘಟನೆಗಳಿಂದ ಎಚ್ಚರಿಕೆ
ಬೆಂಗಳೂರು: ಆರ್ ಎಸ್ ಎಸ್ ಸಂಸ್ಥಾಪಕರಲ್ಲಿ ಒಬ್ಬರಾದ ವೀರ್ ಸಾರ್ವಕರ್ ಕೂಡ ಮಾಂಸ ಸೇವನೆ ಮಾಡುತ್ತಿದ್ದರು ಎನ್ನುವ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ವಿರುದ್ಧ ಬಲಪಂಥೀಯ ಸಂಘಟನೆಗಳು ಎಚ್ಚರಿಕೆ ನೀಡಿವೆ.
ದಿನೇಶ್ ಗುಂಡೂ ರಾವ್ ತಮ್ಮ ಹೇಳಿಕೆಗೆ ಕ್ಷಮೆ ಕೇಳ ಬೇಕು, ಇಲ್ಲದಿದ್ದರೆ ಅವರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಸಂಘಟನೆಗಳು ಎಚ್ಚರಿಸಿವೆ.
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ದಿನೇಶ್ ಗುಂಡೂರಾವ್, ವೀರ್ ಸಾರ್ವಕರ್ ಬ್ರಾಹ್ಮಣ ಸಮುದಾಯದವರು ಅವರು ಕೂಡ ಮಾಂಸಾಹಾರ ಸೇವಿಸುತ್ತಿದ್ದರು. ಈ ಮೂಲಕ ಅವರೊಬ್ಬ ಮಾರ್ಡನಿಸ್ಟ್ ಆಗಿದ್ದರು. ಎಂದು ಅವರು ಹೇಳಿದರು.
ಮೂಲಭೂತವಾದ ನಮ್ಮ ದೇಶದ ಸಂಸ್ಕೃತಿಯಲ್ಲ. ವೀರ್ ಸಾರ್ವಕರ್ ಯುರೋಪ್ ನಿಂದ ಪ್ರಭಾವಿತರಾಗಿದ್ದರೆಂದು ಹೇಳಿದ್ದರು.
ರಾಷ್ಟ್ರಪಿತ ಗಾಂಧೀಜಿಯವರು ಸಸ್ಯಹಾರಿ ಆಗಿದ್ದರು. ನಮ್ಮ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದರು. ದೇಶದಲ್ಲಿಂದು ದೊಡ್ಡ ಸಂಪ್ರದಾಯವಾದಿಗಳಿದ್ದಾರೆ. ಆದರೆ ಸಂಪ್ರದಾಯವಾದಿಗಳಲ್ಲ, ಮೂಲಭೂತವಾದಿಗಳೂ ಅಲ್ಲ. ಇದನ್ನು ನಾವು ಅರಿತುಕೊಳ್ಳಬೇಕಿದೆ ಎಂದಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: