ಮುಸ್ಲಿಂ ಗೆಳೆಯನನ್ನೇ ಮದ್ವೆ ಆಗಿದ್ದಕ್ಕೆ ಟಾರ್ಗೆಟ್: ನಟಿ ಪ್ರಿಯಾಮಣಿ ವಿರುದ್ಧ ದ್ವೇಷದ ಕಮೆಂಟ್
ಗೆಳೆಯ ಮುಸ್ತಫಾರನ್ನು ವಿವಾಹವಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ತನ್ನ ವಿರುದ್ಧ ವ್ಯಕ್ತವಾದ ದ್ವೇಷದ ಪ್ರತಿಕ್ರಿಯೆಗಳ ಬಗ್ಗೆ ಖ್ಯಾತ ನಟಿ ಪ್ರಿಯಾಮಣಿ ಮಾಧ್ಯಮದ ಮುಂದೆ ತೆರೆದಿಟ್ಟಿದ್ದಾರೆ. 2017ರಲ್ಲಿ ಇವರು ಮುಸ್ತಫ ಅವರೊಂದಿಗೆ ವಿವಾಹವಾಗಿದ್ದರು. ಆತ ಜಿಹಾದಿಯಾಗಿದ್ದಾನೆ, ನಿನಗೆ ಹುಟ್ಟುವ ಮಕ್ಕಳು ಟೆರರಿಸ್ಟ್ ಗಳಾಗುತ್ತಾರೆ ಎಂದೆಲ್ಲ ತನ್ನನ್ನು ಹೀಯಾಳಿಸಿದವರ ಬಗ್ಗೆ ಮೊದಲ ಬಾರಿ ಪ್ರಿಯಾಮಣಿ ಸಾರ್ವಜನಿಕವಾಗಿ ಮಾತಾಡಿದ್ದಾರೆ.
ಫಿಲಂ ಫೇರ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನಟಿ ತನ್ನ ಮನಸ್ಸನ್ನು ತೆರೆದಿಟ್ಟಿದ್ದಾರೆ. ನನಗೆ ಹುಟ್ಟುವ ಮಕ್ಕಳ ಮೇಲೂ ದ್ವೇಷ ಕಾರುವ ರೋಗಿಷ್ಟ ಜನರು ನಮ್ಮ ಸುತ್ತಮುತ್ತ ಇದ್ದಾರೆ ಅನ್ನೋದು ಆಘಾತಕಾರಿ ಎಂದು ಅವರು ಹೇಳಿದ್ದಾರೆ.
ನನ್ನ ಕುಟುಂಬದ ಅನುಮತಿಯೊಂದಿಗೆ ನಾನು ವಿವಾಹವಾಗಲು ನಿರ್ಧರಿಸಿದೆ ಮತ್ತು ಆ ಬಗೆ ಫೇಸ್ಬುಕ್ನಲ್ಲಿ ನಾನೊಂದು ಪೋಸ್ಟ್ ಹಂಚಿಕೊಂಡೆ. ತಕ್ಷಣ ನನ್ನ ವಿರುದ್ಧ ದ್ವೇಷವನ್ನು ಕಾರುವ ಪ್ರತಿಕ್ರಿಯೆಗಳು ತುಂಬ ತೊಡಗಿತು.
ಜಿಹಾದಿ, ಮುಸ್ಲಿಂ, ನಿಮ್ಮ ಮಕ್ಕಳು ಟೆರರಿಸ್ಟ್ ಗಳಾಗಲಿದ್ದಾರೆ ಎಂದು ಮುಂತಾಗಿ ಜನರು ಅತ್ಯಂತ ನಿಂದನಾತ್ಮಕವಾಗಿ ಪ್ರತಿಕ್ರಿಯಿಸಿದರು ಎಂದು ಪ್ರಿಯಾಮಣಿ ಹೇಳಿದ್ದಾರೆ.
ಇತ್ತೀಚಿಗೆ ನಾನು ಈದ್ ಗೆ ಸಂಬಂಧಿಸಿ ಒಂದು ಪೋಸ್ಟ್ ಹಾಕಿದೆ. ತಕ್ಷಣ ನಾನು ಇಸ್ಲಾಮಿಗೆ ಮತಾಂತರವಾಗಿದ್ದೇನೆ ಎಂದು ಕೆಲವರು ಬರೆದರು ಎಂದು ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth