ಬೆಂಗಳೂರಿನ ಟಿಟಿ ಡ್ರೈವರ್ ಚಿಕ್ಕಮಗಳೂರಲ್ಲಿ ಹೃದಯಾಘಾತದಿಂದ ಸಾವು
06/10/2024
ಚಿಕ್ಕಮಗಳೂರು : ಬೆಂಗಳೂರಿನ ಟಿಟಿ ಡ್ರೈವರ್ ಚಿಕ್ಕಮಗಳೂರಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಚಿಕ್ಕಮಗಳೂರಿಗೆ ಪ್ರವಾಸಿಗರನ್ನ ಕರೆತಂದಾಗ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಅವಿನಾಶ್ (25) ಮೃತ ದುರ್ದೈವಿ. ಬೆಂಗಳೂರಿನ ಸೋಮನಹಳ್ಳಿ ಮೂಲದ ಅವಿನಾಶ್ ಮೂರು ವರ್ಷದ ಹಿಂದೆ ಮದುವೆಯಾಗಿದ್ದು, ಅವರಿಗೆ 2 ವರ್ಷದ ಮಗು ಕೂಡ ಇದೆ.
ಪ್ರವಾಸಿಗರನ್ನ ಹೋಂ ಸ್ಟೇ ಬಳಿ ಬಿಟ್ಟ ಬಳಿಕ ಅವಿನಾಶ್ ಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಪತ್ನಿಸಲಾಯಿತಾದರೂ , ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.
ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: