ಬಿಗ್ ಬಾಸ್ ಮನೆಯಿಂದ ಯಮುನಾ ಶ್ರೀನಿಧಿ ಔಟ್
ಬಿಗ್ ಬಾಸ್ ಕನ್ನಡ ಸೀಸನ್ 11ರ ಮೊದಲ ವಾರದ ಎಲಿಮಿನೇಷನ್ ನಡೆದಿದೆ. ಈ ಎಲಿಮಿನೇಷನ್ ಬಿಗ್ ಬಾಸ್ ವೀಕ್ಷಕರಿಗೆ ಅಚ್ಚರಿ ತಂದಿದೆ.
ವಯಸ್ಸು 45 ದಾಟಿದರೂ ಗಟ್ಟಿಗಿತ್ತಿ ಸಹ ಸ್ಪರ್ಧಿಗಳಿಗೆ ಠಕ್ಕರ್ ಕೊಡುತ್ತಿದ್ದ ಯಮುನಾ ಶ್ರೀನಿಧಿ ಅವರು ಎಲಿಮಿನೇಷನ್ ಆಗಿದ್ದಾರೆ. ಇದು ಯಾರೂ ಊಹಿಸದ ಎಲಿಮಿನೇಷನ್ ಅಂತಿದ್ದಾರೆ ಬಿಗ್ ಬಾಸ್ ವೀಕ್ಷಕರು.
ನವರಾತ್ರಿ ಹಬ್ಬದ ಸಂದರ್ಭದಲ್ಲಿ ಎಲಿಮಿನೇಷನ್ ಇರೋದಿಲ್ಲ ಅಂತ ಹೇಳಲಾಗಿತ್ತು. ಆದ್ರೆ ಯಮುನಾ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಜನರಿಗೆ ಪರಿಚಿತರಾಗಿದ್ದ ಯಮುನಾ ಅವರು ತಮ್ಮದೇ ರೀತಿಯಲ್ಲಿ ಬಿಗ್ ಬಾಸ್ ನಲ್ಲಿ ಆಟ ಆರಂಭಿಸಿದ್ದರು. ಭರತನಾಟ್ಯ ಕಲಾವಿದೆಯಾಗಿಯೂ ಅವರು ಹೆಸರುವಾಸಿಯಾಗಿದ್ದರು.
ಕಡಿಮೆ ವೋಟ್ ಪಡೆದುಕೊಂಡ ಕಾರಣಕ್ಕೆ ಯಮುನಾ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಿದ್ದಾರೆ ಎಂದು ಹೇಳಲಾಗಿದೆ.
ಲಾಯರ್ ಜಗದೀಶ್, ಗೌತಮಿ ಜಾಧವ್, ಹಂಸ, ಭವ್ಯಾ ಗೌಡ, ಯಮುನಾ, ಶಿಶಿರ್ ಮಾನಸಾ, ಮೋಕ್ಷಿತಾ ಪೈ ಹಾಗೂ ಚೈತ್ರಾ ಕುಂದಾಪುರ ನಾಮಿನೇಟ್ ಆಗಿದ್ದರು. ಈ ಪೈಕಿ ಯಮುನಾ ಅವರು ಬಿಗ್ ಬಾಸ್ ನಿಂದ ಹೊರ ಹೋಗುತ್ತಿದ್ದಾರೆ.
ಪ್ರತಿವಾರವೂ ಈ ಪ್ರಕ್ರಿಯೆ ನಡೆಯಲಿದೆ. ಪ್ರತಿವಾರವೂ ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರ ಹೋಗಲಿದ್ದಾರೆ. ಪ್ರಬಲವಾಗಿ ಹೋರಾಡುವ ಸ್ಪರ್ಧಿಗಳು ಮಾತ್ರವೇ ಬಿಗ್ ಬಾಸ್ ನಲ್ಲಿ ಉಳಿಯಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: