Telsa Robotaxi: ಅಕ್ಟೋಬರ್ 10ರಂದು ಬಿಡುಗಡೆಯಾಗಲಿದೆ ಎಲಾನ್ ಮಸ್ಕ್ ಅವರ ಚಾಲಕ ರಹಿತ ಕಾರು
ಅಗ್ರ ಶ್ರೀಮಂತ, ಟೆಲ್ಸಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಅವರ ಬಹುನಿರೀಕ್ಷಿತ ರೊಬೊಟ್ಯಾಕ್ಸಿ ಅಕ್ಟೋಬರ್ 10ರಂದು ಬಿಡುಗಡೆಯಾಗಲಿದೆ.
ಇದು ಸಂಪೂರ್ಣವಾಗಿ ಚಾಲಕರಹಿತ ಕಾರು. ಇದರಲ್ಲಿ ಅಲಂಕಾರಕ್ಕೂ ಸ್ಟಿಯರಿಂಗ್ ವೀಲ್ ಅಥವಾ ಪೆಡಲ್ ಗಳು ಇರುವುದಿಲ್ಲ. ಗಿಯರ್ ಬಾಕ್ಸ್, ಕ್ಲಚ್, ಆಕ್ಸಿಲರೇಟರ್, ಬ್ರೇಕ್ ಯಾವುದೂ ಇತರೆ ಕಾರುಗಳಂತೆ ಇರುವುದಿಲ್ಲ. ಎಲಾನ್ ಮಸ್ಕ್ ಕಂಪನಿಯ ಈ ಕಾರು ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಹೆಚ್ಚಾಗಿದೆ.
ಪ್ರಯಾಣಿಕರ ಟ್ಯಾಕ್ಸಿ ಸೇವೆಗಾಗಿ ಎಲಾನ್ ಮಸ್ಕ್ ಕಂಪನಿ ಈ ಕಾರನ್ನು ಅಭಿವೃದ್ಧಿಪಡಿಸಿದೆ. ಈ ಕಾರಿನ ನಿರ್ದಿಷ್ಟ ಹೆಸರು ಇನ್ನೂ ಬಹಿರಂಗವಾಗಿಲ್ಲ.
ಈ ಕಾರಿನ ಗುಟ್ಟನ್ನು ಎಲಾನ್ ಮಸ್ಕ್ ಇಲ್ಲಿಯವರೆಗೆ ಬಿಟ್ಟುಕೊಟ್ಟಿಲ್ಲ. ಆದರೆ, ಸದ್ಯ ಈ ಕಾರು ಹೇಗಿರಲಿದೆ ಎಂಬ ಊಹಾಪೋಹ ಹರಡಿದೆ. ಇದೇ ಸಮಯದಲ್ಲಿ ಟೆಕ್ ಜಗತ್ತಿನ ಬುದ್ಧಿವಂತ ಅನ್ವೇಷಣೆಯಾದ ಚಾಟ್ ಜಿಪಿಟಿಯಲ್ಲಿ ಈ ರೊಬೊಟ್ಯಾಕ್ಸಿ ಹೇಗಿರಲಿದೆ ಎಂದು ಕೇಳಿದಾಗ ಕಲಾತ್ಮಕ ಫೋಟೋವನ್ನು ಬಿಡಿಸಿಕೊಟ್ಟಿದೆ. ಇದನ್ನು ಡೈಲಿಮೇಲ್ ಪ್ರಕಟಿಸಿದೆ. ಇದರಲ್ಲಿ ಎರಡು ಸೀಟುಗಳು, ಸಿಲ್ವರ್ ಸ್ಟೀಲ್ ಬಾಡಿ, ರೂಫ್ ನಲ್ಲಿ ಒಂದು ಕ್ಯಾಮೆರಾ ಕಾಣಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97