KSRTC: ಆಯುಧ ಪೂಜೆಗೆ ಹಣವಿಲ್ವಾ? : 1 ಬಸ್ ಗೆ 100 ರೂ.ಖರ್ಚು ಮಾಡಲು ಸೂಚನೆ
ಬೆಂಗಳೂರು: ಈ ಬಾರಿ ಆಯುಧ ಪೂಜೆಗೆ KSRTC ಬಸ್ ಗಳಿಗೆ ಆಯುಧ ಪೂಜೆ ಸಲ್ಲಿಸಲು 1 ಬಸ್ ಗೆ 100 ರೂಪಾಯಿಯಂತೆ ಬಳಸಲು ಸಾರಿಗೆ ನಿಗಮ ಸೂಚನೆ ನೀಡಿದೆ ಎಂದು ವರದಿಯಾಗಿದೆಯಾಗಿದೆ.
ಆಯುಧ ಪೂಜೆ ಸ್ವಚ್ಛತೆ, ಅಲಂಕಾರಕ್ಕೆ ಕೆಎಸ್ ಆರ್ ಟಿಸಿ ಅಲ್ಪ ಹಣವನ್ನು ಬಿಡುಗಡೆ ಮಾಡಿದೆ. ಒಂದು ಬಸ್ ನ ಸ್ವಚ್ಛತೆ ಅಲಂಕಾರಕ್ಕೆ ಈ ಹಣ ಸಾಕಾಗುತ್ತಾ ಅನ್ನೋದು ಸಿಬ್ಬಂದಿಯ ಅಸಮಾಧಾನವಾಗಿದೆ.
100 ರೂಪಾಯಿಗೆ ಒಂದು ಹೂವಿನ ಮಾಲೆ ಕೂಡ ಸಿಗುವುದಿಲ್ಲ. ಆ ಮಟ್ಟಕ್ಕೆ ಬೆಲೆ ಏರಿಕೆ ತಾಂಡವವಾಡುತ್ತಿದೆ. ಹೀಗಿರುವಾಗ ಇಲಾಖೆ ಕೇವಲ 100 ರೂಪಾಯಿ ನೀಡು ಕೈತೊಳೆದುಕೊಳ್ಳುತ್ತಿದೆ ಎನ್ನುವುದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರಂತೆ.
ಶಕ್ತಿ ಯೋಜನೆಯಿಂದ KSRTC ಶಕ್ತಿ ಕಳೆದುಕೊಂಡಿತೇ? ಅವೈಜ್ಞಾನಿಕ ಯೋಜನೆಯಿಂದ ಕೆಎಸ್ ಆರ್ ಟಿಸಿ ಸಂಸ್ಥೆಗೆ ಆಯುಧ ಪೂಜೆ ನಡೆಸಲೂ ದುಡ್ಡು ಇಲ್ಲವಾಯ್ತೆ ಎನ್ನುವ ಅನುಮಾನಗಳು ಇದೀಗ ಸೃಷ್ಟಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: