ಕಾಡಿನಲ್ಲಿ ಆಹಾರದ ಕೊರತೆ: ಮನೆ ಬಾಗಿಲಿಗೆ ಬಂದ ಕಾಡಾನೆ
09/10/2024
ಕೊಟ್ಟಿಗೆಹಾರ: ಸಮೀಪದ ದೇವನಗುಲ್ ಗ್ರಾಮದಲ್ಲಿ ಮನೆ ಸಮೀಪವೇ ಕಾಡಾನೆ ಬಂದು ದಾಂಧಲೆ ನಡೆಸಿರುವ ಘಟನೆ ಮಂಗಳವರ ರಾತ್ರಿ ನಡೆದಿದೆ.
ದೇವನಗುಳಗ್ರಾಮದ ಬೆಳ್ಳಾಚಾರ್ ಮನೆಯ ಸುತ್ತಮುತ್ತ ಇದ್ದ ಬಾಳೆ ತೆಂಗು ಅಡಿಕೆ ಮರಗಳನ್ನು ನಾಶ ಮಾಡಿದೆ ಕೊಟ್ಟಿಗೆ ಹಾರ ಸುತ್ತಮುತ್ತ ಒಂದೆಡೆ ಅತಿಯಾದ ಮಳೆಗೆ ಕಾಫಿ ಮೆಣಸು ಮೊದಲಾದ ಬೆಳೆಗಳು ನೆಲಕಚ್ಚಿದರೆ ಇನ್ನೊಂದೆಡೆ ಕಾಡಾನೆ ಕಾಟಕ್ಕೆ ಜನರು ಬೇಸತ್ತು ಹೋಗಿದ್ದಾರೆ.
ಕಾಡಿನಲ್ಲಿ ಆನೆಗಳಿಗೆ ಆಹಾರದ ಕೊರತೆ ಇರುವುದರಿಂದ ಊರಿನತ್ತ ಮುಖ ಮಾಡಿದೆ. ಅರಣ್ಯ ಇಲಾಖೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಬೆಳ್ಳಾಚಾರ್ ಆಗ್ರಹಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: