10 ಸಾವಿರ ಹಣ ಕಳೆದುಕೊಂಡಿದ್ದ ವ್ಯಕ್ತಿಗೆ ಹಣ ಮರಳಿಸಿ ಮಾನವೀಯತೆ ಮೆರೆದ ಆಟೋ ಚಾಲಕ
09/10/2024
ಕೊಟ್ಟಿಗೆಹಾರ : ಹಣ ಕಳೆದುಕೊಂಡಿದ್ದ ವ್ಯಕ್ತಿಯ ಹಣವನ್ನು ಮರಳಿಸಿ ಆಟೋ ಚಾಲಕ ಮಾನವೀಯತೆ ಮೆರೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ ನಡೆದಿದೆ.
ಕೊಟ್ಟಿಗೆಹಾರದ ರಾಮ್ ಪ್ರಸಾದ್ ಪ್ರಾವಿಜನ್ ಸ್ಟೋರ್ ಮಾಲೀಕ ವಿಕ್ರಂ ಬಿದಿರುತಳ ಅವರು ತುರ್ತು ಕಾರ್ಯಕ್ಕೆ ಬಣಕಲ್ ಗೆ ಹೋಗಿದ್ದರು. ಮೊಬೈಲ್ ತೆಗೆಯುವ ಅವಸರದಲ್ಲಿ ರೂ.10 ಸಾವಿರವನ್ನು ಬಣಕಲ್ ನಲ್ಲಿ ಕಳೆದುಕೊಂಡು ಬಂದಿದ್ದರು.
ಹಣ ಕಳೆದುಕೊಂಡು ವಿಕ್ರಂ ಚಡಪಡಿಸುತ್ತಿದ್ದಾಗ, ಹಣ ಸಿಕ್ಕಿದ ಬಣಕಲ್ ಆಟೋ ಚಾಲಕ ತನ್ಜೀಲ್ ಅವರು ಕೊಟ್ಟಿಗೆಹಾರಕ್ಕೆ ಬಂದು ಹಣ ಬೀಳಿಸಿಕೊಂಡು ಬಂದ ವಿಕ್ರಂ ಅವರಿಗೆ ಹಣ ಮರಳಿಸಿ ಮಾನವೀಯತೆ ಮೆರೆದರು. ಅಂಗಡಿಯ ಮಾಲೀಕ ತನ್ಜೀಲ್ ಅವರಿಗೆ ಹಣ ಮರಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: