ಕೊನೆಗೂ ಕುಟುಂಬ ಪತ್ತೆ: 77 ವರ್ಷಗಳ ಬಳಿಕ ಶಾಫಿಯ ಫ್ಯಾಮಿಲಿ ಪತ್ತೆ
1947ರ ದೇಶ ವಿಭಜನೆ ಎಂಥ ಭೀಕರ ಪರಿಸ್ಥಿತಿಗೆ ಸಾಕ್ಷಿಯಾಗಿರಬಹುದು ಅನ್ನೋದಕ್ಕೆ ಮೊಹಮ್ಮದ್ ಶಾಫಿ ಎಂಬ ಈ ಪ್ರಕರಣ ಅತ್ಯಂತ ಸ್ಪಷ್ಟ ಉದಾಹರಣೆಯಾಗಿದೆ. ಪಶ್ಚಿಮ ಪಂಜಾಬಿನಲ್ಲಿದ್ದ ಈ ಮೊಹಮ್ಮದ್ ಶಾಫಿ ಕುಟುಂಬ ವಿಭಜನೆಯ ಕಾರಣಕ್ಕಾಗಿ ಪಾಕಿಸ್ತಾನದ ಪಾಲಾಯಿತು.
ಆದರೆ 10 ವರ್ಷದ ಬಾಲಕ ಮಹಮ್ಮದ್ ಶಾಫಿ ಆ ಕಾಲದ ಪರಿಸ್ಥಿತಿಯ ಸುಳಿಗೆ ಸಿಲುಕಿ ಪಂಜಾಬಿನಲ್ಲೇ ಉಳಿದು ಹೋದ. ಇದೀಗ ಈ ಮಹಮ್ಮದ್ ಶಾಫಿಗೆ 77 ವರ್ಷ. ಹೆಸರು ಮಹೇಂದರ್ ಸಿಂಗ್ ಗಿಲ್. ಇದೀಗ ಈ ಮಹಮ್ಮದ್ ಶಾಫಿಯ ಕುಟುಂಬವನ್ನು ಪಾಕಿಸ್ತಾನದಲ್ಲಿ ಪತ್ತೆ ಹಚ್ಚಲಾಗಿದ್ದು ಅವರನ್ನು ಜೊತೆಗೂಡಿಸಲಾಗುತ್ತಿದೆ.
ಈ ಬಾಲಕ ಮಹಮ್ಮದ್ ಶಾಫಿಯನ್ನು ಸಿಖ್ ಕುಟುಂಬ ದತ್ತು ಪಡಕೊಂಡಿದೆ ಮತ್ತು ಮಹೀಂದರ್ ಸಿಂಗ್ ಗಿಲ್ ಎಂದು ಹೆಸರಿಟ್ಟಿದೆ. ಜೆ ಎನ್ ಯು ಪ್ರೊಫೆಸರ್ ನಾನಿಕ ದತ್ತ ಅವರ ಪ್ರಯತ್ನದಿಂದ ಈ ಮೊಹಮ್ಮದ್ ಶಫಿ ಅವರ ಪಾಕಿಸ್ತಾನಿ ಕುಟುಂಬವನ್ನು ಸಂಪರ್ಕಿಸಿ ಅವರ ನಡುವೆ ಸಂಬಂಧ ಏರ್ಪಡುವಂತೆ ಮಾಡಲಾಗಿದೆ.
ಈ ಮಹೀಂದರ್ ಸಿಂಗ್ ಗಿಲ್ ಅವರ ತಂದೆಯ ಹೆಸರು ಚಿರಾಗ್ ದೀನ್ ಮತ್ತು ತಾಯಿಯ ಹೆಸರು ಫಾತಿಮಾ. ಇವರು ಹೇಳಿದ ಆ ಊರಿನ ಹೆಸರನ್ನು ಗೂಗಲ್ ಮಾಡಿದಾಗ ಪಾಕಿಸ್ತಾನದ ಪೂರ್ವ ಪಂಜಾಬ್ ನ ಪ್ರದೇಶದಲ್ಲಿ ಅದಿರುವುದು ಪತ್ತೆಯಾಗಿದೆ. ಅಲ್ಲಿನ ಸಂಜೆ ವಾಲೆ ಎಂಬ ಯುಟ್ಯೂಬ ರ್ ಆದ ಲಷ್ ಹರಿ ಅವರನ್ನ ದತ್ತ ಅವರು ಸೋಶಿಯಲ್ ಮೀಡಿಯಾದ ಮೂಲಕ ಸಂಪರ್ಕಿಸಿ ಮಹೀಂದರ್ ಸಿಂಗ್ ಅವರ ಕುಟುಂಬವನ್ನು ಸಂಪರ್ಕಿಸುವಂತೆ ಕೇಳಿಕೊಂಡಿದ್ದಾರೆ. ಲಶ್ ಹರಿ ಅವರು ಪಾಕಿಸ್ತಾನದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಮತ್ತು 77 ವರ್ಷಗಳ ಬಳಿಕ ಈ ಮಹೀಂದರ್ ಸಿಂಗ್ ಅವರ ಕುಟುಂಬ ಮತ್ತು ಅವರ ತಂದೆಯ ಕುಟುಂಬ ಭೇಟಿಯಾಗಿದೆ. ಆ ಬಳಿಕ ಗೂಗಲ್ ಮೂಲಕ ಪರಸ್ಪರ ಮಾತಾಡಿದ್ದಾರೆ. ಈಗ ಮಹೀಂದರ್ ಗಿಲ್ ತನ್ನ ಹೆಸರನ್ನ ಮಹಿಂದರ್ ಶಾಪಿ ಎಂದು ಬದಲಿಸಿಕೊಂಡಿದ್ದಾರೆ. ಇಷ್ಟೊಂದು ದೀರ್ಘಕಾಲ ಅಗಲಿಕೆಯ ಬಳಿಕ ಒಂದಾಗುವ ಅಪರೂಪದ ಘಟನೆ ಇದು ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth